*ಸಕಲೇಶಪುರ ವೀರಶೈವ ಸಮಾಜದ ಜೋಡೆತ್ತುಗಳಂತೆ ಪುನೀತ್ ಬನ್ನಳ್ಳಿ ಮತ್ತು ಸಾಗರ್ ಜಾನೇಕೆರೆಯವರನ್ನು ಶ್ಲಾಘಿಸಿದ ಸಿದ್ದಗಂಗಾ ಶ್ರೀಗಳು* ಇಂದು ಬೊಮ್ಮನಕೆರೆ , ಹರಗರಹಳ್ಳಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ಟ್ರಸ್ಟ್ ವತಿಯಿಂದ ನೆರವೇರಿದ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ *ಶ್ರೀ ಶ್ರೀ ಶ್ರೀ ಸಿದ್ದಲಿಂಗಾ ಸ್ವಾಮಿಗಳು, ಸಿದ್ದಗಂಗಾ ಮಠದ ಪೀಠಾಧ್ಯಕ್ಷರು.* ಮಾತನಾಡಿ ಅನ್ನದ ಪ್ರಾಮುಕ್ಯತೆ ಬಗ್ಗೆ ತಿಳಿಸಿದರು ಹಾಗೆಯೇ ಮನುಷ್ಯ ಅನ್ನ ಪ್ರಸಾದಕ್ಕೆ ಗೌರವಿಸಬೇಕು ಎಂದು ದಾಸೋಹದ ಬಗ್ಗೆ ಮಾತನಾಡಿದರು. ಹಾಗೆಯೇ ಇಂದಿನ ದಾಸೋಹದ ಸೇವಾರ್ಥದಾರರಾದ ಪುನೀತ್ ಬನ್ನಳ್ಳಿ ರವರ ಸೇವಾ ಮನೋಭಾವಕ್ಕೆ ಶ್ಲಾಘನೆಯನ್ನ ವ್ಯಕ್ತಪಡಿಸಿದರು ಹಾಗೆಯೇ ಸಕಲೇಶಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರ ಪ್ರತಿಮೆಯ ಪ್ರತಿಷ್ಠಾಪನೆಯ ಕಾರ್ಯದಲ್ಲಿ ಇವರ ಕೊಡುಗೆ ಅಪಾರವಾದುದು . ಹಾಗೆಯೇ ಸಾಗರ್ ಜಾನೇಕೆರೆ ರವರು ಕೂಡ ಸಕಲೇಶಪುರ ಬಾಗದಲ್ಲಿ ದಾಸೋಹ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನೆರವೇರಿಸುತ್ತಾ ಬಂದಿರುತ್ತಾರೆ ಎಂದು ಇಬ್ಬರು ವೀರಶೈವ ಸಾಮಾಜದ ಯುವ ನಾಯಕರನ್ನು ಶ್ರೀ ಗಳು ಶ್ಲಾಘಿಸಿದರು. ಹಾಗೆಯೇ ಗ್ರಾಮದ ಗ್ರಾಮಸ್ಥರಿಗೆ ಮತ್ತು ಭಕ್ತಾಧಿಗಳಿಗೆ ಆಶೀರ್ವಚನ ನೀಡಿದರು.