ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಕಲೇಶಪುರ ರವರಿಂದ ಇಂದು ಸಾಮಾಜಿಕ ಅರಣ್ಯೀಕರಣದ ಅಡಿಯಲ್ಲಿ ಬಿಸಿಲೆ ಘಾಟ್ ಸಮೀಪದ ಬಾಣಿಗೆರೆ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು ಹಾಗೂ ಸುಮಾರು ಅರ್ಧ ಕಿಲೋಮೀಟರ್ ಹೊಳೆ ದಾಟಿ ಗಿಡಗಳನ್ನು ಹೊತ್ತು ನೆಡಲಾಯಿತು

ಈ ಕಾರ್ಯಕ್ರಮಕ್ಕೆ ಮಾನ್ಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಮಮತಾ ಹರೀಶ್ ರಾವ್ ಮೇಡಂ ರವರು ಆಗಮಿಸಿ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನಾಟಿ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು

ಕಾರ್ಯಕ್ರಮದಲ್ಲಿ ತಾಲೂಕು ವಲಯ ವಿಭಾಗ ಅರಣ್ಯಾಧಿಕಾರಿ ರವರಾದ ವಿಜಯ್ ಕುಮಾರ್ ಸರ್. ಹಾಗೂ ತಾಲೂಕು ಮಾನ್ಯ ಯೋಜನಾಧಿಕಾರಿಗಳಾದ ಪುರುಷೋತ್ತಮ್.ಕೆ ಸರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ. ಮೇಲ್ವಿಚಾರಕರಾದ ಅನಂದ್ ಚಿರಂತ್. ಸೇವಾ ಪ್ರತಿನಿಧಿಗಳು. ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು. ಸ್ಥಳೀಯರು ಆಗಮಿಸಿದ್ದರು

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *