ಹಾಸನದಲ್ಲಿ ಬಿಡದ ಜಡಿ ಮಳೆ

ಹಾಸನ: ಕಳೆದ ಹಲವಾರು ದಿವಸಗಳಿಂದ ಹಾಸನ ಜಿಲ್ಲಾಧ್ಯಂತ ಸತತವಾಗಿ ಮಳೆ ಸುರಿಯುತ್ತಿದ್ದು, ಒಂದು ಕಡೆ ರೈತರಿಗೆ ಸಂತಸ ತಂದರೇ ಇನ್ನೊಂದು ಕಡೆ ವ್ಯಾಪರಸ್ತರಿಗೆ, ಕೆಲಸ ಮಾಡುವವರಿಗೆ ಸಲ್ಪ ಕಿರಿಕಿರಿ ಉಂಟುಮಾಡಿದೆ.

ಮಳೆಯು ಒಂದೆ ಬಾರಿ ಬಾರದೇ ಬಿಟ್ಟು ಬಿಟ್ಟು ಆಗಾಗ್ಗೆ ಮಳೆಯು ಅಬ್ಬರಿಸುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆಯು ಸತತವಾಗಿ ಬರುತ್ತಿದೆ. ಮಳೆಯಿಂದ ರಸ್ತೆ ಮೇಲೆ ಇರುವ ಗುಂಡಿಗಳಲ್ಲಿ ನೀರು ತುಂಬಿಕೊಂಡು ಹಳ್ಳದಂತೆ ಕಂಡು ಬರುತ್ತಿದೆ. ರಸ್ತೆ ಬದಿ ವ್ಯಾಪಾರಸ್ತರು ಕೊಡೆಯ ಆಸರೆ ಪಡೆದರೇ ಇನ್ನು ಕೆಲವರು ಪ್ಲಾಸ್ಟಿಕ್ ಹಾಸಿ ರಕ್ಷಣೆ ಪಡೆದು ವ್ಯಾಪಾರ ಮಾಡುತ್ತಿರುವುದು ಕಾಣಿಸಿದೆ.

ವಾಹನದಲ್ಲಿ ಶಾಲಾ ಮಕ್ಕಳು ಹೋಗುವುದುರಿಂದ ಅನೇಕರಿಗೆ ಸಮಸ್ಯೆ ಆಗಲಿಲ್ಲ. ಆದರೇ ನಡೆದುಕೊಂಡು ಹೋಗುವುದು ಕೊಡೆಯ ಮೂಲಕ ಸಾಗಿದರು.

ತಗ್ಗು ಪ್ರದೇಶದಲ್ಲಿ ವಾಸ ಮಆಡುವ ಜನರು ಮಳೆಯಿಂದ ಸಮಸ್ಯೆ ಎದುರಿಸಬೇಕಾಯಿತು.

ಇನ್ನು ಕೆರೆ ಕಟ್ಟೆಯು ಕೆಲ ಕಡೆ ತುಂಬಿದರೇ ಇನ್ನು ಅನೇಕ ಕಡೆ ತುಂಬಬೇಕಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *