
ಸಕಲೇಶಪುರ : ಪ್ರತಿವರ್ಷ ಜುಲೈ 1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಹೆಸರಾಂತ ವೈದ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿಧನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವನ್ನು ಗೌರವಿಸುವ ದೃಷ್ಟಿಯಿಂದ ಭಾರತ ಸರ್ಕಾರವು ಈ ದಿನಾಂಕವನ್ನು ಆಯ್ಕೆ ಮಾಡಿದೆ.
ವೈದ್ಯರಿಗೆ ಶುಭಾಷಯಗಳನ್ನು ಹೇಳಲು ಇಂದು ರೋಟರಿ ನರ್ಸರಿ ಶಾಲೆಯ ಪುಟಾಣಿ ಮಕ್ಕಳು ತಮ್ಮ ಗುರುಗಳೊಂದಿಗೆ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಸಾಮೂಹಿಕವಾಗಿ ಶುಭಾಷಯಗಳನ್ನು ಹೇಳುವ ಮೂಲಕ ವೈದ್ಯರಿಗೆ ಅಚ್ಚರಿ ಮೂಡಿಸಿದರು
ಈ ಸಂದರ್ಭದಲ್ಲಿ ಕ್ರಾಫರ್ಡ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಹೇಶ್ ಸೇರಿದಂತೆ ಹಲವು ವೈದ್ಯರು ಮಕ್ಕಳೊಂದಿಗೆ ಕೆಲ ನಿಮಿಷಗಳ ಕಾಲ ಖುಷಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ರೋಟರಿ ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ ಪೊನ್ನಪ್ಪ ಹಾಗೂ ಇತರ ಶಿಕ್ಷಕಿಯರು ಹಾಜರಿದ್ದರು.




