
ಸಕಲೇಶಪುರ. ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಮಾಡಲು ತೀರ್ಮಾನಿಸಿದ್ದು, ಅದರಂತೆ ಎಲ್ಲಾ ರೂಪುರೇಷೆಗಳು ನಡೆಯುತ್ತಿದ್ದು, ಇಂದು ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕರಾದ ಪ್ರತಾಪ್ ಗೌಡ ರವರು ಬೆಂಗಳೂರಿನ ಬಿಡದಿ ಸಮೀಪದಲ್ಲಿ ಕೆಂಪೇಗೌಡರವರ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಬೇಟಿ ನೀಡಿ ವೀಕ್ಷಣೆ ಮಾಡಿ ಮೂರ್ತಿಯಲ್ಲಿ ಆಗಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದರು.
