ಶಿಮ್ಲಾ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಮೇ 19ರಂದು ಘೋಷಿಸಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳುವ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿದೆ.ಆದರೆ, ಈ ಮಧ್ಯೆ ಭಕ್ತಾದಿ ಒಬ್ಬರು ದೇವಸ್ಥಾನದ ಕಾಣಿಕೆ ಹುಂಡಿಗೆ ಬರೋಬ್ಬರಿ 8 ಲಕ್ಷ ರೂಪಾಯಿ ದೇಣಿಗೆ ಹಾಕುವ ಮೂಲಕ ಸುದ್ದಿಯಾಗಿರುವ ಘಟನೆ ಹಿಮಾಚಲಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ನಡೆದಿದೆ.8 ಲಕ್ಷ ರೂಪಾಯಿ ಕಾಣಿಕೆಕಂಗ್ರಾದಲ್ಲಿರುವ ಮಾ ಜ್ವಾಲಾ ದೇವಿ ದೇವಸ್ಥಾನದ ಕಾಣಿಕೆ ಹುಂಡಿಗೆ ವ್ಯಕ್ತಿ ಒಬ್ಬರು 2,000 ಸಾವಿರ ರೂಪಾಯಿ ಮುಖಬೆಲೆಯ ಸುಮಾರು 400 ನೋಟುಗಳನ್ನು ಹಾಕಿದ್ದಾರೆ. ಅಂದರೆ 8 ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್ ಕುಮಾರ್ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆಗಾಗ್ಗೆ ಇಂತಹ ಕಾಣಿಕೆಗಳನ್ನು ನೀಡುತ್ತಿರುತ್ತಾರೆ. ಹುಂಡಿಯಲ್ಲಿ ದೊರೆಕಿರುವ ಹಣವನ್ನು ಸಂಪೂರ್ಣವಾಗಿ ಭಕ್ತರ ಸೌಲಭ್ಯಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಂಗ್ರಾ ಜಿಲ್ಲಾ ಡಿಸಿಪಿ ನಿಪುನ್ ಜಿಂದಾಲ್ ಈ ಕುರಿತು ತಮ್ಮಗೆ ಯಾವುದೇ ದೂರು ದಾಖಲಾಗಿಲ್ಲ ದೇವಾಲಯದ ಪ್ರದೇಶದ ಸುತ್ತ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.