ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ವಿದ್ಯುತ್​ ಬಿಲ್​ ವಿಚಾರದಲ್ಲಿ ಲೈನ್​ಮ್ಯಾನ್​ ಮತ್ತು ಜನಸಾಮಾನ್ಯರ ನಡುವೆ ಜಟಾಪಟಿಗಳು ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ 200 ಯೂನಿಟ್​ ಉಚಿತ ಎಂದು ಕಾಂಗ್ರೆಸ್​ ಹೇಳಿತ್ತು.ಇದೀಗ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್​ ಬಿಲ್​ ಕಟ್ಟುವುದಿಲ್ಲ ಎಂದು ಲೈನ್​ಮ್ಯಾನ್​ಗಳ ಜತೆ ಜಗಳಕ್ಕೆ ಇಳಿದಿದ್ದಾರೆ.ಇಷ್ಟು ದಿನ ಬರೀ ಮಾತಿನಲ್ಲಿ ನಡೆಯುತ್ತಿದ್ದ ಜಗಳ ಇಂದು ಹಲ್ಲೆ ಮಾಡುವ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ.ವಿದ್ಯುತ್​ ಉಚಿತ ಅಂತ ಹೇಳಿದ್ದಾರೆ ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬುವವರು ವಿದ್ಯುತ್​ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಿಲ್​ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಲ್​ ವಸೂಲಾತಿಗೆಂದು ಅವರ ಮನೆಗೆ ಲೈನ್​ಮ್ಯಾನ್​ ಮಂಜುನಾಥ್​ ಎಂಬುವರು ತೆರಳಿದ್ದರು. ಬಿಲ್​ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಕೇಳಿದರೆ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್​ ಕಟ್ಟುವುದಿಲ್ಲ. ವಿದ್ಯುತ್​ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದನು.ಚಪ್ಪಲಿಯಿಂದ ಹಲ್ಲೆ ಸರ್ಕಾರ ಇನ್ನು ಅಧಿಕೃತವಾಗಿ ಜಾರಿ ಮಾಡಿಲ್ಲ. ಜಾರಿ ಮಾಡಿದ ಬಳಿಕ ನೋಡೋಣ, ಸದ್ಯಕ್ಕೆ ಹಳೆಯ ಬಿಲ್​ ಅನ್ನು ಪಾವತಿಸಿ ಎಂದು ಮಂಜುನಾಥ್​ ಕೇಳಿದ್ದಾರೆ. ಆದರೆ, ಬಿಲ್​ ಕಟ್ಟಲು ಒಪ್ಪದ ಚಂದ್ರಶೇಖರಯ್ಯ, ಅವಾಚ್ಯ ಶಬ್ದಗಳಿಂದ ಮಂಜುನಾಥ್​ರನ್ನು ನಿಂದಿಸಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಂಜುನಾಥ್​ ಮೇಲೆ ಚಂದ್ರಶೇಖರಯ್ಯ ಚಪ್ಪಲಿಯಿಂದ ಹಲ್ಲೆ ಮಾಡಿ, ದುರ್ವರ್ತನೆ ತೋರಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *