ಬೇಲೂರು : ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ಇರುವಂತಹ ಶ್ರೀ ಸೀತಾರಾಮಾಂಜನೇಯ ದೇವಾಲಯದ ಬಳಿ ಇದ್ದ ತೆಂಗಿನ ಮರವೊಂದು ಗಾಳಿಗೆ ಬಿದ್ದ ಪರಿಣಾಮವಾಗಿ ಆಸ್ಪತ್ರೆ ಬಳಿ ನಿಲ್ಲಿಸಿದ್ದ ಸುಮಾರು ೧೦ ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಮೇಲೆ ಬಿದ್ದಿದ್ದರಿಂದ ಜಖಂ ಗೊಂಡಿದೆ.
ಅದೃಷ್ಠವಶಾತ್ ಮರಬಿದ್ದ ಸಂದರ್ಭದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ.ಅದೇ ರೀತಿ ಪಟ್ಟಣದ ಪಂಪ್ ಹೌಸ್ ಬೀದಿಯಲ್ಲಿ ಎರಡು ಬೃಹದಾಕಾರದ ತೆಂಗಿನ ಮರ ಬಿದ್ದ ಹಿನ್ನಲೆಯಲ್ಲಿ ಟಿಎಪಿಸಿಎಂಎಸ್ ವಾಣಿಜ್ಯ ಸಂಕೀರ್ಣದ ಮೇಲೆ ಬಿದ್ದ ಪರಿಣಾಮವಾಗಿ ಕಟ್ಟಡಕ್ಕೆ ಬಿದ್ದಿದ್ದರಿಂದ ಕಟ್ಟಡ ಹಾನಿಯಾಗಿದ್ದು ಮರ ಬಿದ್ದ ಸಮಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಭಾಗದಲ್ಲಿ ಸಂಚರಿಸದೆ ಇದ್ದಿದ್ದರಿಂದ ಹೆಚ್ಚಿನ ಅನಾವುತ ತಪ್ಪಿದಂತಾಗಿದೆ.