ಆಲೂರು : ಪಟ್ಟಣದ ಕೊನೇಪೇಟೆಯ ಬಿಕ್ಕೋಡು ರಸ್ತೆಯಲ್ಲಿರುವ ಸ್ಪನ್ ಪೋಲ್ ವಿದ್ಯುತ್ ಕಂಬ ಒಂದು ಯಾವ ಕ್ಷಣದಲ್ಲಾದರೂ ಬೀಳುವ ಹಂತದಲ್ಲಿದೆ.

ಆಲೂರು ಪಟ್ಟಣದ ದೊಡ್ಡ ಮಸೀದಿ ಬಳಿ ಇರುವ ಕೊನೆಪೇಟೆ ವೃತ್ತದಲ್ಲಿ ನಾಗರೋತ್ಪನ್ನ ಯೋಜನೆ ಅಡಿ ಪಿಡಬ್ಲ್ಯೂಡಿ ಇಲಾಖೆಯಿಂದ ಕಳೆದ 2022ರ ಮೇ ತಿಂಗಳಲ್ಲಿ ನಡೆದ ಬೇಲೂರಿನಿಂದ ಆಲೂರು ಮಾರ್ಗವಾಗಿ ಮಡಿಕೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿಯ ವೇಳೆ ಬಿಕ್ಕೋಡು ರಸ್ತೆಗೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಚರಂಡಿಯಿಂದಾಗಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಚರಂಡಿಯ ಪಕ್ಕದಲ್ಲೇ ಇರುವ ವಿದ್ಯುತ್ ಕಂಬ ಒಂದು ಚರಂಡಿ ಇಂದ ರಭಸವಾಗಿ ಹರಿಯುತ್ತಿರುವ ನೀರಿನಿಂದ ಕೊರಕಲು ಉಂಟಾಗಿ ಹಾಗೂ ಕಂಬದ ಸುತ್ತಲಿನ ಭದ್ರತೆಯಲ್ಲಿ ಶಿಥಿಲತೆ ಉಂಟಾಗಿ ಯಾವ ಕ್ಷಣದಲ್ಲಿ ಬೇಕಾದರೂ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು ಅಪಾಯದ ಹಂಚಿನಲ್ಲಿದೆ

ಈ ವಿದ್ಯುತ್ ಕಂಬವು 11 ಮೀಟರ್ ಎತ್ತರದ ಸ್ಪನ್ ಫೋಲ್ ಆಗಿದ್ದು ಇದರಲ್ಲಿ 11,000 ಕಿಲೋ ವ್ಯಾಟ್ ನ ವಿದ್ಯುತ್ ವಾಹಕ ತಂತಿ ಹಾಗೂ ಸೆಕೆಂಡರಿ ಮಾರ್ಗ ಎರಡು ಸಹ ಇದ್ದು ಈ ಕಂಬವು ಭದ್ರತೆಯನ್ನು ಕಳೆದುಕೊಂಡು ಬಿದ್ದರೆ ಪ್ರಾಣ ಹಾನಿಯ ಜೊತೆಗೆ ಬೀಳುವ ಸೆಳೆತಕ್ಕೆ ಈ ಕಂಬಕ್ಕೆ ಹೊಂದಿಕೊಂಡಿರುವ 10 ಹಲವಾರು ಕಂಬಗಳು ಮುರಿದು ಬೀಳುವುದರ ಜೊತೆಗೆ ಉಂಟಾಗಬಹುದಾದ ಶರ್ಟ್ ಸರ್ಕ್ಯೂಟ್ ನಿಂದಾಗಿ ಸಾವಿರಾರು ಮನೆಗಳ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸಾರ್ವಜನಿಕರ ಮತ್ತು ಸರ್ಕಾರಿ ಕಟ್ಟಡಗಳ ಆಸ್ತಿ ನಷ್ಟ ಆಗುವ ಸಾಧ್ಯತೆ ಇದೆ.

ಈ ಸಂಬಂಧವಾಗಿ ಸ್ಥಳ ಪರಿಶೀಲನೆ ನಡೆಸಿದ ಸೆಸ್ಕಾಂ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪತ್ರ ಮುಖೇನ ಪಿಡಬ್ಲ್ಯೂಡಿ (ಲೋಕೋಪಯೋಗಿ ) ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಇಲಾಖೆಯ ಗಮನಕ್ಕೆ ತಂದಿದ್ದು ಮುಂದಿನ ಅಗತ್ಯ ಕ್ರಮಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಅದೇ ರೀತಿ ಪಟ್ಟಣ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ಸಹ ಇದು ಲೋಕೋಪಯೋಗಿ ಇಲಾಖೆಯ ಕಾಮಗಾರಿ ಆಗಿರುವುದರಿಂದ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿರುವುದಾಗಿ ತಿಳಿಸಿರುತ್ತಾರೆ.

*ಅವರನ್ನು ಬಿಟ್ಟು ಇವರನ್ನು ಬಿಟ್ಟು ಅವರ್ಯಾರು…?* ಮೂರು ಇಲಾಖೆಗಳು ಪತ್ರ ವ್ಯವಹಾರದಲ್ಲೇ ಮುಸುಕಿನ ಗುದ್ದಾಟ ನಡೆಸುತ್ತಿದ್ದು. ಉಂಟಾಗಬಹುದಾದ ಸಾರ್ವಜನಿಕ ಆಸ್ತಿಪಾಸ್ತಿ ಪ್ರಾಣ ಹಾನಿಗೆ ಹೊಣೆ ಯಾರು? ಎಂಬಂತಾಗಿದೆ…!

ಅಪಾಯದ ಸ್ಥಿತಿಯಲ್ಲಿರುವ ಈ ವಿದ್ಯುತ್ ಕಂಬದ ವೃತದಲ್ಲಿ ಹಲವಾರು ಶಾಲಾ ವಾಹನಗಳು, ಕೆ ಎಸ್, ಆರ್, ಟಿ,ಸಿ ವಾಹನಗಳು, ಖಾಸಗಿ ವಾಹನಗಳು ಸದಾ ಕಾಲ ಓಡಾಡುತ್ತಿರುವುದಲ್ಲದೆ. ಹಲವಾರು ವಾಣಿಜ್ಯ ಮಳಿಗೆಗಳು ಹೋಟೆಲ್ ಗಳು ಇದ್ದು ಕಂಬದ ಬಳಿಯೇ ಬಿಕ್ಕೋಡು ಕಣತೂರು ಮಾರ್ಗವಾಗಿ ಓಡಾಡುವ ಪ್ರಾಣಿಕರು ಕೆ,ಎಸ್,ಆರ್,ಟಿ,ಸಿ ವಾಹನಗಳಿಗೆ ಹಾಗೂ ಖಾಸಗಿ ವಾಹನಗಳಿಗೆ ಹತ್ತಲು ಕಾಯುತ್ತಾ ನಿಂತಿರುತ್ತಾರೆ.

ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಶೀಘ್ರವಾಗಿ ಗಮನಹರಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಾಗಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *