ಹಾಸನ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಮಣ್ಣಿನ ತೇವಾಂಶ ಹೆಚ್ಚಾಗಿ ಹಳೆಯ ಕಾಲದ ಬನ್ನಿಮರವೊಂದು ಇತಿಹಾಸ ಪ್ರಸಿದ್ಧ ಶ್ರೀ ಜವೇನಹಳ್ಳಿ ಮಠದ ಮೇಲೆ ಬಿದ್ದು, ಬಹುತೇಕ ಹಾನಿಯಾದ ಘಟನೆ ರಾತ್ರಿ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಆಗಿರುವುದಿಲ್ಲ. ದುರಸ್ತಿ ಮಾಡಿಸಲು ಕೂಡಲೇ ಪರಿಹಾರ ಘೋಷಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮಠದ ಸದ್ಬಕ್ತರು ಆಗ್ರಹಿಸಿದ್ದಾರೆ.

ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಸುಮಾರು ೭೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಜವೇನಹಳ್ಳಿ ಮಠದ ಮೇಲೆ ೩೦೦ ವರ್ಷಗಳ ಹಳೆಯ ಬೃಹತ್ ಮರವೊಂದು ಧರೆಗೆ ಉರುಳಿದ ಹಿನ್ನಲೆಯಲ್ಲಿ ಕಲ್ಲಿನ ಮಠವು ಬಹುತೇಕ ಡ್ಯಾಮೇಜು ಆಗಿದ್ದು, ಗರ್ಭಗುಡಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶ ಹೆಚ್ಚಾಗಿ ಈಗಾಗಲೇ ಅನೇಕ ಮರಗಳು ಕಳೆಗೆ ಬೀಳುತ್ತಿದೆ. ಮರ ಬೀಳುವ ವೇಳೆ ಏನಾದರೂ ಮಠದ ಒಳಗೆ ಭಕ್ತರು ಇದ್ದರೇ ಬಾರಿ ಅನಾಹುತವೇ ಆಗುತಿತ್ತು. ಆದರೇ ಮರ ಬಿದ್ದ ವೇಳೆ ಭಕ್ತರು ಗರ್ಭ ಗುಡಿಯ ದೂರದಲ್ಲಿ ಇದ್ದುದರಿಂದ ಯಾವುದೇ ಪಾಣ ಹಾನಿ ಸಂಭವಿಸಿರುವುದಿಲ್ಲ.

ಇದೆ ವೇಳೆ ಶ್ರೀ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರು ಹಾಗೂ ಸದ್ಭಕ್ತರು ಮಠದ ಮೇಲೆ ಬೃಹತ್ ಮರ ಬಿದ್ದಿರುವುದನ್ನು ವೀಕ್ಷಣೆ ಮಾಡಿ ಅಸಮಧಾನವ್ಯಕ್ತಪಡಿಸಿದರು.

ಶ್ರೀ ಜವೇನಹಳ್ಳಿ ಹಿತಾರಕ್ಷಣಾ ಸಮಿತಿ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿರುವ ಸುಮಾರು ೭೦೦ ವರ್ಷಗಳ ಇತಿಹಾಸವಿರುವಂತಹ ಶ್ರೀ ಜವೇನಹಳ್ಳಿ ಮಠ ಇಂದು ದುಸ್ತಿತಿಯಲ್ಲಿದೆ.

ಹೆಚ್ಚಿನ ಮಳೆಯಿಂದ ಮಠದ ಬಳಿ ಇದ್ದಂತಹ ಮುನ್ನೂರು ವರ್ಷಗಳ ಹಳೆಯದಾದ ಬನ್ನಿಮರವೊಂದು ಮಠದ ಮೇಲೆ ಬಿದ್ದು ಹೆಚ್ಚು ಹಾನಿಯಾಗಿದೆ.

ಈ ಮಠದ ಪುನರ್ ದೇವಾಲಯವನ್ನು ನಿರ್ಮಾಣ ಮಾಡಬೇಕಾಗಿರುವುದರಿಂದ ಎಲ್ಲಾ ಭಕ್ತರ ಸಹಕಾರ ಅಗತ್ಯವಿದೆ ಎಂದರು.

ಈ ಮಠ ಹಾನಿ ಆಗಿರುವ ಬಗ್ಗೆ ಜಿಲ್ಲಾಡಳಿತ ತಾಲೂಕು ಆಡಳಿತವು ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಡಿ ಮಳೆ ಹಿಡಿದಿರುವುದರಿಂದ ಬಹಳ ಹಳೆಯ ಬೃಹತ್ ಮರ ಮಠದ ಮೇಲೆ ಬಿದ್ದಿರುವುದರಿಂದ ಮಠದ ಹಳೆಯ ಕಾಲದ ಕಲ್ಲುಗಳೆಲ್ಲಾ ಜರುಗಿದ್ದು, ಮಠದ ಒಳಗೆ ಮಳೆ ನೀರು ಹರಿಯುತ್ತಿದೆ. ಇದನ್ನ ಅಭಿವೃದ್ಧಿಯನ್ನು ಪಡಿಸಬೇಕಾಗಿದೆ.

ಈ ದುರಂತದಿಂದ ದೇವಸ್ಥಾನದ ಒಳಗೆ ಹೋಗಲು ಸ್ಥಳವಾಕಾಶ ಇಲ್ಲದೇ ನಮ್ಮ ಅರ್ಚಕರು ಹೊರಗಡೆಯೇ ಪೂಜೆ ಮಾಡಿದ್ದಾರೆ. ಶೀಘ್ರವೇ ಜಿಲ್ಲಾಡಳಿತ ಗಮನವಹಿಸಿ ದುರಸ್ತಿ ಮಾಡಿಸಲು ಮುಂದಾಗುವಂತೆ ಮನವಿ ಮಾಡಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *