
ಸಕಲೇಶಪುರ ತಾಲೂಕು ಹಾನಬಾಳು ಕೇಂದ್ರ ಸ್ಥಾನದಲ್ಲಿರುವ ಕೆಪಿಎಸ್ ಶಾಲೆಯ ಪ್ರೌಢಶಾಲಾ ವಿಭಾಗದ ಆವರಣದಲ್ಲಿರತಕ್ಕಂತ ಸುಮಾರು 70 ವರ್ಷದ ಹಳೆಯ ಕಟ್ಟಡ ಸುರಿದಂತ ಬಾರಿ ದಾರಕಾರ ಮಳೆಗೆ ತಡರಾತ್ರಿ ಕುಸಿದು ಬಿದ್ದಿರುತ್ತದೆ.
ಈ ಹಳೆಯ ಕಟ್ಟಡದಲ್ಲೇ ಅಡುಗೆ ಕೋಣೆ ಇದ್ದು ಅದೃಷ್ಟವಶಾತ್ ಇದು ತಡರಾತ್ರಿ ಬಿದ್ದಿರುವುದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಶಾಲಾ ಅವಧಿಯಲ್ಲಿ ಏನಾದರೂ ಈ ರೀತಿಯ ದುರಂತ ಆಗಿದ್ರೆ ಸುಮಾರು ಅನಾಹುತಗಳು ಆಗುವ ಸಂಬವ ಇತ್ತು.
ಇಂದು ಮುಂಜಾನೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಸಂತೋಷ್, ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಉಪಾಧ್ಯಕ್ಷರಾದ ಮೋಹನ್ ಹಾಗೂ ಸಂತೋಷ್ ಹೆಚ್.ಎಸ್. ಕಾರ್ಯದರ್ಶಿಗಳಾದ ಲೋಹಿತ್ ,ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮೋಹನ್ ಅಚ್ಚರಡಿ ಜೊತೆಗೆ ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಅರುಣ್, ಮತ್ತು ಹಿರಿಯ ವಿದ್ಯಾರ್ಥಿಗಳಾದ ಕೃಷ್ಣ , ಜೊತೆಗೆ ಪಂಚಾಯಿತಿಯ ಕಾರ್ಯದರ್ಶಿಗಳಾದ ಶ್ರೀ ಮತಿ ವೀಣಾರವರು ಭೇಟಿ ನೀಡಿ ಆಗಿರತಕ್ಕಂತ ಅನಾಹುತದ ಬಗ್ಗೆ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿರುತ್ತಾರೆ.
ದಯಮಾಡಿ ಈ ಸಂಬಂಧ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತುರ್ತು ಸ್ಥಳ ಪರಿಶೀಲನೆ ಮಾಡಿ ಸುಮಾರು 70 ವರ್ಷದ ಹಳೆಯ ಕಟ್ಟಡವನ್ನು ಆದಷ್ಟು ಶೀಘ್ರಗತಿಯಲ್ಲಿ ತೆರೆವುಗೊಳಿಸಲು ಕ್ರಮ ಕೈಗೊಳ್ಳಬೇಕಾಗಿ sdmc ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮ ಪಂಚಾಯಿತಿಯ ವತಿಯಿಂದ ಮನವಿ ಮಾಡಿದರು…


