ಎರಡು ಲಾರಿಗಳ ನಡುವೆ ಅಪಘಾತ ಚಾಲಕನಿಗೆ ಗಾಯ.ಸಕಲೇಶಪುರ : ಮಂಗಳೂರಿಂದ ಬಳ್ಳಾರಿಗೆ ತೆರಳುತ್ತಿದ್ದ ಲಾರಿಗಳ ನಡುವೆ ಡಿಕ್ಕಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ.ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಕೂಡಿಗೆ ಬಳಿ ಕಳೆದ ರಾತ್ರಿ ಎರಡು ಲಾರಿಗಳು ಕೊಕ್ ತುಂಬಿಸಿಕೊಂಡು ಬಳ್ಳಾರಿ ಕಡೆಗೆ ಹೊರಟಿದ್ದವು. ಬಳ್ಳಾರಿ ಮೂಲದ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಊಟಕ್ಕೆ ತೆರಳಿದ್ದ ವೇಳೆ ತಮಿಳುನಾಡು ಮೂಲದ ಮತ್ತೊಂದು ಲಾರಿ ಹಿಂಬದಿಯಿಂದ ನಿಂತಿದ್ದ ಲಾರಿಗೆ ರಭಸವಾಗಿ ಡಿಕ್ಕಿ ಮಾಡಿದ ಪರಿಣಾಮ ಲಾರಿ ಚಾಲಕ ಗಾಯಗೊಂಡು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತ ನಡೆಸಿದ ತಮಿಳುನಾಡು ಮೂಲದ ಚಾಲಕ ಪಾನಮತ್ತನಾಗಿ ಲಾರಿಯನ್ನು ಚಾಲನೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.