ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುತೂಹಲ ಅಂತಿಮ ಹಂತಕ್ಕೆ ತಲುಪಿದ್ದು, ದೆಹಲಿಯಲ್ಲಿ ವರಿಷ್ಠ ನಾಯಕರೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಎರಡು ಹಂತದ ಸಭೆಗಳನ್ನು ನಡೆಸಿ, ಸಂಪುಟದಲ್ಲಿ ಖಾಲಿ ಇರುವ 24 ಸಚಿವ ಸ್ಥಾನಗಳನ್ನು ತುಂಬುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹಾಗೂ ಎಂಟು ಸಚಿವರು ಮೇ 20ರಂದು ಪ್ರಮಾಣವಚನ ಸ್ವೀಕರಿಸಿದ್ದು, ಸಂಪುಟದ ಗರಿಷ್ಠ ಗಾತ್ರ 34.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದು ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಹಿರಿಯೂರಿನ ಡಿ. ಸುಧಾಕರ್ ಹೆಸರಿಗೆ ಮಾತ್ರ ಎಂದು ಕಾಂಗ್ರೆಸ್ನ ಉನ್ನತ ಮೂಲಗಳು ಖಚಿತಪಡಿಸಿವೆ.ಎಐಸಿಸಿಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಸಲಾಗಿದ್ದ ಮಹತ್ವದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ ವೇಣುಗೋಪಾಲ ಭಾಗಿಯಾಗಿದ್ದು ಅಂತಿಮ ನಿರ್ಧಾರದ ಬಗ್ಗೆ ಸಲಹೆ-ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಸಚಿವ ಸ್ಥಾನ ನೀಡುವುದು ಮಲ್ಲಿಕಾರ್ಜುನ ಖರ್ಗೆ ನಿರ್ಧಾರವಾಗಿರಲಿದೆ.
ಸಂಭವನೀಯ ಸಚಿವರು
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳ್ಕರ್
ಶಿವಾನಂದ ಪಾಟೀಲ್
ಶರಣ ಬಸಪ್ಪ ದರ್ಶನಾಪುರ
ಬಸವರಾಜ ರಾಯರೆಡ್ಡಿ
ಡಾ.ಎಚ್.ಸಿ.ಮಹದೇವಪ್ಪ
ಕೆ.ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ಅಜಯ್ ಸಿಂಗ್
ನರೇಂದ್ರ ಸ್ವಾಮಿ
ಡಾ.ಎಂ.ಸಿ. ಸುಧಾಕರ್
ಹಿರಿಯೂರು ಡಿ. ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಮಧುಗಿರಿ ರಾಜಣ್ಣ ಅಥವಾ ನಾಗೇಂದ್ರ
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ ತಂಗಡಗಿ
ರುದ್ರಪ್ಪ ಲಮಾಣಿ
ನಸೀರ್ ಅಹ್ಮದ್ ಅಥವಾ ಬಿ.ಕೆ.ಹರಿಪ್ರಸಾದ್
ಪುಟ್ಟರಂಗ ಶೆಟ್ಟಿ