ಸಕಲೇಶಪುರ.ಮಳಲಿಯ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿತ ರಸ್ತೆಗೆ ಕಳೆದ 5 ವರ್ಷದ ಹಿಂದೆ ಶ್ರೀ ರಂಭಾಪುರಿ ಜಗದ್ಗುರು ರವರ ನಾಮಾಂಕಿತ ಮಾಡಲಾಗಿತ್ತು ಇಂದು ಪಲ್ಲವಿ ಶ್ರೀನಿವಾಸ ಹಾಗೂ ಕೆಲ ದುಷ್ಕರ್ಮಿಗಳು ಆ ರಸ್ತೆಯ ನಾಮ ಫಲಕ ಧ್ವಂಸ ಮಾಡಿದ್ದು ಈ ಕೃತ್ಯ ನಮ್ಮ ಸಮಾಜದ ಶ್ರೀ ಗಳಿಗೆ ಮತ್ತು ನಮಗೆ ಮಾಡಿರುವ ಅಗೌರವ ತಂದಿದ್ದಾರೆ ಎಂದು ಮಲೆನಾಡು ವೀರಶೈವ ಸಮಾಜ ವತಿಯಿಂದ ಸಕಲೇಶಪುರ ನಗರ ಠಾಣೆಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಲೆನಾಡು ವೀರಶೈವ ಸಮಾಜ (ರಿ), ಕಾರ್ಯಕರ್ತರು, ವೀರಶೈವ ಲಿಂಗಾಯತ ಯುವ ಸೇನೆ (ರಿ)ಯ ಅಧ್ಯಕ್ಷ ಸಾಗರ್ ಜಾನೆಕೆರೆ ,ಮಳಲಿ ಸ್ವಾಮಿ,ಜಯಣ್ಣ ಕ್ಯಾಮನಹಳ್ಳಿ, ಶರತ್ ಧನಲಕ್ಷ್ಮಿ ಮೆಡಿಕಲ್, ಯೋಗೇಶ್ ಮಳಲಿ ಹಾಗೂ ಮಳಲಿ ಗ್ರಾಮಸ್ಥರು ಇದ್ದರು.