ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಮಂಜುಳಾ ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ನೆರವೇರಿತು.
ಸುಮಾರು 8 ವರ್ಷದಿಂದ ಸೇವೆ ಸಲ್ಲಿಸಿದ ಮಂಜುಳಾ ರವರು ಉತ್ತಮ ಸೇವೆ ಸಲ್ಲಿಸಿ ಇದೀಗ ಹಾಸನ ತಾಲೂಕಿಗೆ ವರ್ಗಾವಣೆಗೊಂಡಿರುವ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಅರ್ಥಪೂರ್ಣವಾಗಿ ಮಾಡಲಾಯಿತು.
ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ಬಿ.ಈ ರಾಜು, ಅವರು ಆಯೋಜನೆ ಮಾಡಿದ್ದರು.
ಈ ಸಂಧರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ರವೀಶ್. ಹಾಗೂ ಎಲ್ಲಾ ಸದಸ್ಯರು, ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿ ಬಳಗ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ನರಸಯ್ಯ ರವರು ಉಪಸ್ಥಿತರಿದ್ದರು