ಬೆಳಗಾವಿ : ಮೌನಿ ಅಮಾವಾಸ್ಯೆಯಂದು ಭಕ್ತರಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ.
ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ಕು ಮಂದಿ ಉಸಿರು ಚಲ್ಲಿದ್ದಾರೆ.
ಮೌನಿ ಅಮಾವಾಸ್ಯೆಯಂದು ಭಕ್ತರಸಂಖ್ಯೆಯಲ್ಲಿ ಏರಿಕೆಯಾದ ಕಾರಣ ಕಾಲ್ತುಳಿತದಂತಹ ದುರಂತ ನಡೆದು 17 ಜನರು ದುರಂತ ಅಂತ್ಯ ಕಂಡಿದ್ದಾರೆ.
ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ಕು ಮಂದಿ ಉಸಿರು ಚಲ್ಲಿದ್ದಾರೆ.ಈ ದುರಂತದಲ್ಲಿ ತಾಯಿ ಹಾಗೂ ಮಗಳು ಕೂಡ ಬಲಿಯಾಗಿದ್ದಾರೆ.
ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಠನ ಹಾಗೂ ಮೇಘಾ ಹತ್ತರವಾಠ ಎಂಬುವವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
13 ಜನರ ಜೊತೆ ಮಹಾ ಕುಂಭಮೇಳಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ.
ಇನ್ನೂ ಬೆಳಗಾವಿಯ ನಗರದ ಶೆಟ್ಟಿಗಲ್ಲಿ ನಿಚಾಸಿ ಅರುಣ ಗೋರ್ಪಡೆ ಎಂಬುವವರು ಮೃತಪಟ್ಟಿದ್ದಾರೆ. ಅಲ್ಲದೇ ಬೆಳಗಾವಿ ಶಿವಾಜಿ ನಗರದ ನಿವಾಸಿ ಮಹಾದೇವಿ ಕೂಡ ಬಲಿಯಾಗಿದ್ದಾರೆ.
ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ವಾಪಸ್ಸು ತರಲು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ