ಸಕಲೇಶಪುರ : ಮಳಲಿ ರಸ್ತೆಗೆ ಶ್ರೀ ರಂಭಾಪುರಿ ಜಗದ್ಗುರು ಗಳ ನಾಮಫಲಕ ವನ್ನ ಪಲ್ಲವಿ ಶ್ರೀನಿವಾಸ್ ರವರು ಮತ್ತು ಕೆಲ ಕಿಡಿಗೇಡಿಗಳು ಸೇರಿ ಕಿತ್ತು ಹಾಕಿ ರಂಭಾಪುರಿ ಜಗದ್ಗುರು ಗಳಿಗೆ ಮತ್ತು ವೀರಶೈವ ಸಮುದಾಯಕ್ಕೆ ಅವಮಾನಿಸಿ ಭಾವನೆಗೆ ದಕ್ಕೆ ಉಂಟು ಮಾಡಿದ್ದರು. ಇದನ್ನು ಮಲೆನಾಡು ವೀರಶೈವ ಸಮಾಜದ ಯುವ ಘಟಕದ ವತಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೋರಾಟದ ಫಲವಾಗಿ ಪಲ್ಲವಿ ಶ್ರೀನಿವಾಸ್ ರವರು ವೀರಶೈವರ ಭಾವನೆಗೆ ದಕ್ಕೆ ಮಾಡಿದಕ್ಕೆ ಕ್ಷಮೆ ಯಾಚಿಸಿ ಕಿತ್ತು ಎಸೆದ ನಾಮ ಫಲಕವನ್ನು ಯಥಾವತ್ತಾಗಿ ಮರು ಸ್ಥಾಪನೆ ಮಾಡಿಕೊಡುವುದಾಗಿ ಹೇಳಿದ್ದಾರೆ.