ಬೇಲೂರು : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ‌ಕಲಾ ಮತ್ತು ಎನ್ಎಸ್ ಎಸ್ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಹೆಚ್.ಕೆ.ಸುರೇಶ್ ನಡೆಸಿದರು.

ಪಟ್ಟಣದ ಹೃದಯ ಭಾಗದಲ್ಲಿನ ಜೂನಿಯರ್ ಕಾಲೇಜಿಗೆ ಸಂಬಂಧಿಸಿದ ಮೈದಾನದಲ್ಲಿ ಅನಾಧಿಕೃತ ಗುಡಿಸಲು ನಿರ್ಮಾಣ ಮಾಡಿಕೊಂಡಿದ್ದು, ಅವರಿಗೆ ಶೀಘ್ರವೇ ಬದಲಿ ನಿವೇಶನ ನೀಡುವ ಜೊತೆಗೆ ತೆರವುಗೊಳಿಸಿ, ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡಲಾಗುತ್ತದೆ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ವಿದ್ಯಾರ್ಥಿ ಕಲಾ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಪ್ರಥಮ ಪಿಯುಸಿ ಉದ್ಘಾಟನೆ ಸಮಾರಂಭದ ಉದ್ಘಾಟನೆ ನಡೆಸಿ‌ ಮಾತನಾಡಿದ ಅವರು ನಾನು ಶಾಸಕನಾಗುವ ಮೊದಲು ಜೂನಿಯರ್ ಕಾಲೇಜಿನ ಬಗ್ಗೆ ಅರಿವು ಇದೆ. ಅದರೆ ಸಮಸ್ಯೆ ಇಷ್ಟು ಜಲ್ವಂತ ಸಮಸ್ಯೆ ಎಂಬ ಸಂಬಂಧಿಸಿದ ಅಷ್ಟಾಗಿ ತಿಳಿಸಿಲ್ಲ.

ಅದರೂ ಕಾಲೇಜಿನಲ್ಲಿ ಇಷ್ಟು ಸಮಸ್ಯೆ ಇದೆ ಎಂದು ನಾನು ಇಲ್ಲಿಗೆ ಬಂದಿರುವೆ. ಬೇಲೂರು ಪಟ್ಟಣದಲ್ಲಿ ಇಷ್ಟು ವಿಶಾಲವಾದ ಮೈದಾನ ಇರುವುದು ನಿಜಕ್ಕೂ ನಮ್ಮೆಲ್ಲರ ಸೌಭಾಗ್ಯವೇ ಸರಿ ಇಂತಹ ಮೈದಾನವನ್ನು ಉಳಿಸಬೇಕೆಂದು ಈಗಾಗಲೇ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ.

ಅಂತೆಯೇ ಉಳಿದ ಆಸ್ತಿಯ ಸಂರಕ್ಷಣೆಯನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ಕಳೆದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿತಿಯ ಬಗ್ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶೀಘ್ರವೇ ಗುಡಿಸಿಲಿನ ನಿವಾಸಿಗಳನ್ನು ವಿಶ್ವಾಸಕ್ಕೆ ಪಡೆದು ಅವರಿಗೆ ರಾಯಪುರದ ಬಳಿಯಲ್ಲಿನ ನಿವೇಶನದಲ್ಲಿ ಅವಕಾಶವನ್ನು ಕಲ್ಪಿಸುವುದರ ಮೂಲಕವಾಗಿ ಹಕ್ಕುಪತ್ರ ನೀಡಲಾಗುತ್ತದೆ.

ಬಳಿಕ ತೆರವು ಮಾಡಿ ಕಾಲೇಜಿನ ಆಸ್ತಿಯನ್ನು ಸಂರಕ್ಷಣೆ ಮಾಡಲಾಗುತ್ತದೆ ಎಂದ ಅವರು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ ಪ್ರತಿ ವಿದ್ಯಾರ್ಥಿಗಳು ಕೂಡ ಶೇಕಡ 100 ರಷ್ಟು ಫಲಿತಾಂಶವನ್ನು ಕಾಲೇಜಿಗೆ ತರುವ ಮೂಲಕ ಬೇಲೂರಿನ ಕೀರ್ತಿಯನ್ನು ಹೆಚ್ಚಿಸಬೇಕು ಮುಂದಿನ ದಿನಗಳಲ್ಲಿ ಜೂನಿಯರ್ ಕಾಲೇಜಿಗೆ ಅತಿ ಹೆಚ್ಚು ಮಹತ್ವ ನೀಡುವ ಬಗ್ಗೆ ತಿಳಿಸಿದರು.

ಬೇಲೂರು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಬೇಲೂರಿನ ಶಾಸಕರು ಆಯ್ಕೆ ಆದಂತಹ ಸಂದರ್ಭದಲ್ಲಿ ಜೂನಿಯರ್ ಕಾಲೇಜ್ ಮೈದಾನ, ಸಂತೆ ಮೈದಾನ ಮತ್ತು ಬೇಲೂರು ಪಟ್ಟಣದ ವಾಹನ ದಟ್ಟಣೆಯ ಬಗ್ಗೆ ಪರಿಹಾರ ಮಾಡುವಂತೆ ಅವರಲ್ಲಿ ನಾನು ಮನವಿ ಮಾಡಲಾಗಿದ್ದು, ಅಂತೆಯೇ ಸದ್ಯ ನಾನು ಕೂಡ ಪುರಸಭೆಯ ಅಧ್ಯಕ್ಷರಾಗಿದ್ದು ಶಾಸಕರ ಸಹಮತದೊಂದಿಗೆ ಜೂನಿಯರ್ ಕಾಲೇಜು ಹಿಂಭಾಗದಲ್ಲಿರುವಂತಹ ಗುಡಿಸಲೆಗಳಿಗೆ ನಿವೇಶನವನ್ನು ನೀಡುವುದರ ಮೂಲಕವಾಗಿ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಬಳಿಕ ತೆರವು ಕಾರ್ಯಾಚರಣೆಯನ್ನು ಮಾಡುವುದು ಶತಸಿದ್ಧ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ ಸದಾ ಕಾಲ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಶಾಸಕರೊಂದಿಗೆ ಕೈಜೋಡಿಸುವುದಾಗಿ ತಿಳಿಸಿದಲ್ಲದೆ ನನಗೆ ಅಧ್ಯಕ್ಷನಾಗಿ ಆಯ್ಕೆ ಆಗಲು ಮೂರು ಪಕ್ಷದ ಎಲ್ಲಾ ನಾಯಕರು ಸಹ ನನಗೆ ಆಶೀರ್ವಾದ ನೀಡಿದ್ದು ಅದರಂತೆ ನಾನು ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಪಟ್ಟಣದ ಅಭಿವೃದ್ಧಿಗೆ ಶಾಸಕರ ಸಹಕಾರ ಅತಿ ಮುಖ್ಯ ಹಲವಾರು ವರ್ಷಗಳಿಂದ ಸಮಸ್ಯೆಯಾಗಿ ಉಳಿದಿರುವ ಈ ಸಮಸ್ಯೆಗೆ. ಈಗಾಗಲೇ ರಾಯಪುರ ಬಿಜಿಎಸ್ ಕಾಲೇಜಿನ ಬಳಿ 5 ಕರೆ ಸ್ಥಳವನ್ನು ನಿಗದಿಪಡಿಸಿದ್ದು ಅಲ್ಲಿ ಸುಮಾರು 131 ನಿಮಿಷಗಳು ಮಾಡದಿದ್ದು ಇದರಲ್ಲಿ 57 ಜನ ಗುಡಿಸಲು ನಿವಾಸಿಗಳಿಗೆ ಮೊದಲ ಹಂತದಲ್ಲಿ ಅವರಿಗೆ ನೀಡುವ ಮೂಲಕ ಸಮಸ್ಯೆಗೆ ಪರಿಹರಿಸುವುದಾಗಿ ಭರವಸೆ ನೀಡಿದರು

ಬೇಲೂರು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಲೋಕೇಗೌಡ ಮಾತನಾಡಿ, ೧೯೭೨ ರಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಆರಂಭವಾದ ಜೂನಿಯರ್ ಕಾಲೇಜು ಬಹುತೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ಆದರೆ ಇತ್ತೀಚಿನ ದಿನದಂದು ಕಾಲೇಜಿಗೆ ಸಂಬಂಧಿಸಿದ ಮೈದಾನ ಕೆಲವರು ಒತ್ತುವರಿ ಮಾಡಿದ್ದು, ಅಕ್ರಮವಾಗಿ ಗುಡಿಸಲು ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ವ್ಯಾಸಂಗ ತೀವ್ರ ತೊಂದರೆ ನೀಡುತ್ತಿದ್ದಾರೆ. ದಿನನಿತ್ಯ ‌ಕುಡಿದ ಬಾಟಲಿ, ಮಾಂಸದ ತುಂಡುಗಳು ಸೇರಿದಂತೆ ಅನೈತಿಕ ವಸ್ತುಗಳನ್ನು ಕಾಲೇಜು ‌ಅವರಣ ಅಹಸ್ಯವಾಗಿದೆ.

ಕೆಲ ಜನಪ್ರತಿನಿಧಿಗಳಿಗೆ ಅನಾಧಿಕೃತ ಗುಡಿಸಲು ನಿರ್ಮಾಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ.ಅಕ್ರಮ ಗುಡಿಸಲು ನಿವಾಸಿಗಳು ಇತ್ತೀಚಿನ ದಿನದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡುತ್ತಿದ್ದಾರೆ.ದಯವಿಟ್ಟು ಮಾನ್ಯ ಬೇಲೂರು ಶಾಸಕರಾದ ಹೆಚ್.ಕೆ.ಸುರೇಶ್ ಅವರು ಈ ಬಗ್ಗೆ ಹೆಚ್ಚು ಗಮನ ನೀಡುವ ಮೂಲಕ ಗುಡಿಸಲು ತೆರೆವುಗೊಳಿಸಿ ಕಾಲೇಜು ಆಸ್ತಿಯನ್ನು ಸಂರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜು ಸಮಿತಿ ಸದಸ್ಯರಾದ ರಂಗನಾಥ, ಡಾ.ಚೇತನ್ ಮತ್ತು ಉಪನ್ಯಾಸಕರಾದ ಲಕ್ಷ್ಮೀನಾರಾಯಣ,ಸರ್ವಮಂಗಳ, ವೇದಾವತಿ, ರಂಗಸ್ವಾಮಿ, ಶ್ರೀನಿಧಿ, ಮೋಹನ್, ಕಾವ್ಯಶ್ರೀ, ದೇದೀಪ್ಯ, ಶೃತಿ, ಚಂದ್ರಕಲಾ, ನಾಗೇಶ್, ಸ್ವಾತಿ, ಚಂದ್ರಶೇಖರ, ಸವಿತಾ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *