ಹಾಸನ : ತಾಲೂಕಿನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ಬಿ. ಎಸ್ಸಿ (ಹಾನ್ಸ್) ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಹಾಸನ ತಾಲ್ಲೂಕು ದುದ್ದ ಹೋಬಳಿಯ ಕೆ. ಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ ಒಂಬತ್ತು ಸೆಪ್ಟಂಬರ್ ಸೋಮವಾರದಂದು ಬೀಜಾಮೃತ ಪದ್ದತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸದಾಶಿವನಗೌಡ ಎಸ್ ಎನ್ ಒ ಬೇಸಾಯಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಕಾರೆಕೆರೆ ಹಾಸನ ಆಗಮಿಸಿದ್ದರು. ಕೃಷಿ ವಿದ್ಯಾರ್ಥಿಗಳಾದ ಯಶ್ವಂತ್ ಹಾಗೂ ಗಣೇಶ್ ಲಾಂಛನ್ ಇಬ್ಬರು ಕೂಡಿ ಬೀಜಾಮೃತವನ್ನು ಮಾಡುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ಕೆ.ಹೊಸಹಳ್ಳಿ ರೈತ ಬಾಂಧವರಿಗೆ ತೋರಿಸಿಕೊಟ್ಟರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಡಾ.ಸದಾಶಿವನಗೌಡ ಎಸ್ ಎನ್ ಒ ಇವರು ಬೀಜಾಮೃತವನ್ನು ಏಕೆ ಮಾಡಬೇಕು , ಅದರಿಂದಾಗುವ ಉಪಯೋಗಗಳೇನು, ಹಾಗೂ ಈ ಬೀಜಾಮೃತವನ್ನು ಹೇಗೆ ಮಾಡಿದರೆ ಉತ್ತಮವಾಗಿರುತ್ತದೆ ಎಂಬುದನ್ನು ಎಲ್ಲಾ ರೈತರಿಗೆ ತಿಳಿಸಿಕೊಟ್ಟರು.
ಹಾಗೂ ಬೀಜಾಮೃತದಿಂದ ಬೀಜೋಪಚಾರ ಮಾಡುವುದು ಬರಿ ಕಾಳುಗಳಿಗೆ ಮಾತ್ರವಲ್ಲದೆ ಹಾಲುಗಡ್ಡೆ ಮತ್ತು ಶುಂಠಿಗೂ ಬೀಜೋಪಚಾರ ಮಾಡಬಹುದು ಅದರಿಂದ ಯಾವುದೇ ರೀತಿಯ ತೊಂದರೆಗಳಿಲ್ಲ ಎಂಬುದನ್ನು ಮನವರಿಕೆ ಮಾಡಿಸಿದರು.
ಹಾಗೂ ಎಲ್ಲಾ ರೈತ ಬಾಂಧವರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಸಿದ್ದೇಗೌಡರು, ರಾಮೇಗೌಡರು, ಶಿವೇಗೌಡರು ಹಾಗೂ ಪ್ರಗತಿ ಪರ ರೈತರಾದ ದೀಪಕ್ ಅವರ ಕಾಯ್ರಕ್ರಮದಲ್ಲಿ ಭಾಗವಹಿಸಿದ್ದರು.ಹಾಗೂ ಇವರೆಲ್ಲರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿತು.