ಹೆತ್ತೂರು :- ಗ್ರಾಮದ ಹಾನುಬಾಳು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟ್ಟಕ ಹೆತ್ತೂರು, ಪೂರ್ಣ ಚಂದ್ರ ತೇಜಸ್ವಿಯವರ ಜನ್ಮ ದಿನದ ಅಂಗವಾಗಿ ಸೋಮವಾರ ಅಯೋಜಿಸಿದ್ದ ತೇಜಸ್ವಿಯವರ ಮಲೆನಾಡಿನ ಬದುಕು ಮತ್ತು ಪರಿಸರದ ಬಗ್ಗೆ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ಅನುಭವಗಳನ್ನು ಪುಸ್ತಕದ ಹದಿನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ಮಾರ, ಪ್ಯಾರ, ಕಿವಿ ಎಂಬ ಸಾಕು ನಾಯಿ, ಎಂಗ್ಟ, ಮಾಸ್ತಿ, ಬೈರ, ಸುಸ್ಮಿತ, ಗಾಡ್ಲಿ, ಸೀನಪ್ಪ, ಮುಂತಾದ ಪಾತ್ರಗಳು ನಮಗೂ ಆಪ್ತವಾಗುವಂತೆ ತೇಜಸ್ವಿಯವರು ವಿಶಿಷ್ಟ ಶೈಲಿಯಿಂದ ನಿರೂಪಿಸಿದ್ದಾರೆ. ‘ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂಬ ತೇಜಸ್ವಿಯವರ ಮಾತಿಗೆ ‘ಪರಿಸರದ ಕತೆ’ ಉತ್ತಮ ಉದಾಹರಣೆ.
ಪರಿಸರದ ಕತೆಗಳು ಎನ್ನುವ ಕಥಾ ಸಂಕಲನದಲ್ಲಿ ತೇಜಸ್ವಿಯವರ ಸುತ್ತಮುತ್ತಲಿನ ಪರಿಸರದ ಪಶು-ಪಕ್ಷಿಗಳ ಬಗ್ಗೆ ಹಾಗೂ ತಮ್ಮ ತೋಟದಲ್ಲಿ ಕೆಲಸ ಮಾಡುವ ಕೆಲಸದ ಆಳುಗಳ ವೈಶಿಷ್ಟ್ಯತೆಯನ್ನು ಇದರಲ್ಲಿ ತಿಳಿಯಬಹುದಾಗಿದೆ ಎಂದರು.
ಶಿಕ್ಷಕಿ ಶೋಭ ಸತೀಶ್ ಮಾತನಾಡಿ ನಾಡಿನ ಪಾಠ ಕಾಡಿನಲ್ಲಿದೆ ಎನ್ನುವಂತೆ ಪ್ರಾಣಿ, ಪಕ್ಷಿ. ಸಸ್ಯಗಳು ಇರುವ ಹೊಂದಾಣಿಕೆಯನ್ನು ಮನುಷ್ಕನೂ ಕೂಡ ತೋರಬಹುದಾಗಿದೆ ಎಂಬುದನ್ನೂ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ. ತೇಜಸ್ವಿ ಅವರ ಕೃತಿಗಳನ್ನು ಯುವ ಪೀಳಿಗೆ ಓದಬೇಕು. ಅವರ ಕೃತಿಗಳು ಹೊಸ ಜಗತ್ತನ್ನು ತೆರೆದಿಡುತ್ತವೆ.ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೆತ್ತೂರು ಹೋಬಳಿ ಘಟ್ಟಕ ಅಧ್ಯಕ್ಷ ಹೆಚ್.ಪಿ.ರವಿಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಕುಮಾರಿ ನವೀನ್, ಸಹ ಶಿಕ್ಷಕರಾದ ದಿನೇಶ್, ಫ್ರಭಾಮಣಿ, ಕಸಾಪ ಕಾರ್ಯದರ್ಶಿ ಅತ್ತಿಗನಹಳ್ಳಿಸುರೇಶ್, ಪಧಾಧಿಕಾರಿಗಳಾದ ಹೇಮಂತ ಕುಮಾರ್, ,ಬಾಲುಗೌಡ,ಪತ್ರಕರ್ತ ಜಗದೀಶ್ ಹೆಚ್,ಆರ್ ,ಶಾಲೆಯ ಶಿಕ್ಷಕರು, ಸಿಬ್ವಂದಿ ವರ್ಗ,ವಿಧ್ಯಾರ್ಥಿಗಳು ಇದ್ದರು.