ಸಕಲೇಶಪುರ : ಬಜರಂಗದಳ ಕಾರ್ಯಕರ್ತರು ಪ್ರತಿಷ್ಠಾಪಿಸಿರುವ ರಾಮಧೂತ ಹಿಂದೂ ಮಹಾಗಣಪತಿಯನ್ನು ಗುರುವಾರ ದಿನಾಂಕ 12/09/2024 ರಂದು ವಿಸರ್ಜಿನೆ ಮಾಡಲಾಗುವುದು.
ಬೆಳಗ್ಗೆ 10:30 ಗಂಟೆಯಿಂದ ಗಣಪತಿ ಹೋಮ ಏರ್ಪಡಿಸಿದ್ದು 12:30 ಕ್ಕೆ ಅನ್ನಸಂತರ್ಪಣೆ ಹಾಗೂ 02:00 ಗಂಟೆ ನಂತರ ವಿಸರ್ಜನಾ ಮೆರವಣಿಗೆ ಪ್ರಾರಂಭವಾಗಲಿದೆ.
ಈ ವಿಸರ್ಜನಾ ಮೆರವಣಿಗೆ ಶೋಭಾಯಾತ್ರೆಯಲ್ಲಿ ಮಂಗಳೂರಿನ ಪೊಳಲಿ ಭಜನಾ ತಂಡ. ಚಂಡೆ. ಡೊಳ್ಳು ಕುಣಿತ ಸೇರಿದಂತೆ ನಾಸಿಕ್ ಡೋಲು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ.
ಸಕಲೇಶಪುರದ ಸಮಸ್ತ ಜನತೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ರಾಮಧೂತ ಹಿಂದೂ ಮಹಾಗಣಪತಿಯ ವ್ಯವಸ್ಥಾಪನಾ ಸಮಿತಿಯ ಪ್ರದೀಪ್ ಪೂಜಾರಿ ಮನವಿ ಮಾಡಿದ್ದಾರೆ.