ಸಕಲೇಶಪುರ : ಶ್ರೀ ಗಣಪತಿ ಸೇವಾ ಸಮಿತಿ ಹಾಡ್ಯ ಸುಬ್ಬೇಗೌಡ ಪುರಭವನದಲ್ಲಿ ಇಂದು ಮುಕ್ತಾಯ ಸಮಾರಂಭವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಉಪವಿಭಾಗಾಧಿಕಾರಿ ಡಾ.ಎಂ.ಕೆ.ಶೃತಿ ,ತಹಸೀಲ್ದಾರ್ ಮೇಘನಾ, ಡಿವೈಎಸ್ಪಿ ಪ್ರಮೋದ್ ಕುಮಾರ್ ಜೈನ್,ಪುರಸಭೆ ಅದ್ಯಕ್ಷೆ ಜ್ಯೋತಿ ರಾಜಕುಮಾರ್, ವಿಕಾಸಪರ್ವ ಚಲನ ಚಿತ್ರದ ನಾಯಕ ರೋಹಿತ್ ನಾಗೇಶ್, ನಟಿ ಸ್ವಾತಿ , ಗಣಪತಿ ಸೇವಾ ಸಮಿತಿ ಅದ್ಯಕ್ಷ ರವಿಕುಮಾರ್, ಉಮೇಶ್, ಮಹೇಶ್ ಇತರರು ಇದ್ದರು.
ಈ ವೇಳೆ ವಿವಿದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 55 ಬಾರಿ ರಕ್ತದಾನ ಮಾಡಿರುವ ಆನಂದ್ ಲಿಯೋವಾಸ್, ಪೌರಕಾರ್ಮಿಕರಾದ ಮಂಜುನಾಥ್.ಎ.ಆರ್.ಗುರುಮೂರ್ತಿ,ಮಾಜಿ ಸೈನಿಕ ಸೋಮಶೇಖರ್, ಸಮಾಜ ಸೇವೆಯಿಂದ ಆನಂದ್ ಅಪ್ಪಯ್ಯ, ಅವರಿಗೆ ಸನ್ಮಾನಿಸಲಾಯಿತು.
ನಂತರ ವಾಸವಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.