ಸಕಲೇಶಪುರ :- ತಾಲ್ಲೂಕಿನ ಬೊಮ್ಮನಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ವಡ್ಡರಹಳ್ಳಿ ಮಧು ಅವರಿಗೆ ಸೇರಿದ ಪಿಕಪ್, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಭಾಗಶಃ ಮುರಿದಿದ್ದು ವಿದ್ಯುತ್ತ ಸಂಪರ್ಕ ಕಡಿತಗೊಳಿಸಲಾಗಿತ್ತು.
ಇಂದಿಗೆ ಮೂರು ದಿನವಾದರೂ ಯಾವುದೇ ಚೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ಕೆಲಸವನ್ನು ಮಾಡಿಲ್ಲ. ಅಲ್ಲದೆ ಇಂದು ಬರುತ್ತೇವೆ ನಾಳೆ ಬರುತ್ತೇವೆ ಎಂಬ ಹಾರಿಕೆ ಉತ್ತರವನ್ನು ಕೊಡುತ್ತಿದ್ದು ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಆದಷ್ಟು ಬೇಗ ಲೈಟ್ ಕಂಭ ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಅಗ್ರಹಿಸಿದ್ದಾರೆ.