ಸಕಲೇಶಪುರ – ದಿನಾಂಕ 12/09/24 ರಂದು 2024-25ನೇ ಸಾಲಿನ ಕೆಲಗಳಲೆ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸ.ಹಿ.ಪ್ರಾ ಶಾಲೆ ಕೆಸಗುಲಿ ಯಲ್ಲಿ ಅದ್ಧೂರಿಯಿಂದ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ TAPCMSನ ಅಧ್ಯಕ್ಷರಾದ ಕಿರುವಾಲೆ ಶಶಿಕುಮಾರ್ ರವರು,ಗ್ರಾ.ಪಂ.ಅಧ್ಯಕ್ಷರಾದ ಉಮಾ,ಸದಸ್ಯರಾದ ಮೈತ್ರಿ ಯೋಗೇಶ್,ಚರಣ್ ರವರು, ಜೆಡಿಎಸ್ ಮುಖಂಡರಾದ ದಿಲೀಪ್ ಕೆಸಗುಲಿ ಅವರು, ಮುಖ್ಯ ಶಿಕ್ಷಕರಾದ ಮಮತಾ ರವರು,ಕೆಲಗಳಲೆ ಕ್ಲಸ್ಟರ್ ನ ಎಲ್ಲಾ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಿಂಗರಾಜು, ಉಪಾಧ್ಯಕ್ಷರಾದ ಸತ್ಯಾ ತ್ಯಾಗರಾಜ ರವರು ಮತ್ತು ಸದಸ್ಯರು,ವಾಟರ್ ಮ್ಯಾನ್ ನಿಂಗರಾಜು ಮತ್ತು ಎಲ್ಲಾ ಶಾಲೆಗಳ ಮಕ್ಕಳ ಪೋಷಕರು ಹಾಗೂ ಕೆಸಗುಲಿ ಗ್ರಾಮದ ಸಮಸ್ತ ಗ್ರಾಮಸ್ತರು ಹಾಗೂ ಬಿ.ಆರ್.ಪಿ ಮತ್ತು ಇ.ಸಿ.ಒ ಭಾಗಿಯಾಗಿದ್ದರು.
ಈ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಚಲ ಬಿಡದೆ ಉತ್ಸಾಹದಿಂದ ಪಾಲ್ಗೊಂಡು ಕಾರ್ಯ ನಿರ್ವಹಿಸಿದ ಮುಖ್ಯ ಶಿಕ್ಷಕರಾದ ಮಮತಾ ರವರು,ಸಹ ಶಿಕ್ಷಕರಾದ ರಘು ಹಾಗೂ ರಮೇಶ್ ರವರು,ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಿಂಗರಾಜು ಹಾಗೂ ಪುನೀತ್ ಕುಮಾರ್, ಚಂದ್ರಶೇಖರ್, ತ್ಯಾಗರಾಜ್,ಜೆಸಿಬಿ ಲೋಹಿತ್,ಮಧು, ಸುರೇಶ್ (ಮಾಸ್ಟರ್), ನಿಂಗರಾಜು ಶೆಟ್ಟಿ, ಸೂರ್ಯ ಮತ್ತು ಲೋಕೇಶ್ ಹಾಗೂ ಜೆಡಿಎಸ್ ಮುಖಂಡರಾದ ದಿಲೀಪ್ ಕೆಸಗುಲಿ ರವರಿಗೆ ವೃಧಪೂರವಕ ಧನ್ಯವಾದಗಳನ್ನು ಅರ್ಪಿಸಲಾಯಿತು.
ಈ ಭಾರಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಶಾಲೆಯ ಮಕ್ಕಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ನಂತರ ಬಹಳ ಉತ್ಸಾಹ ಹಾಗೂ ಶ್ರಮದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಿಸಿ ಕೊಟ್ಟ ಶಿಕ್ಷಕ ವೃಂದಧದವರಿಗೂ ಮತ್ತು ಗ್ರಾಮಸ್ಥರಿಗೆ ಹಾಗೂ ಅಥರ್ವ ಟಿಂಬರ್ಸ್ ಮಾಲಿಕರಾದ ಪ್ರಸಾದ್ ಗೌಡರವರಿಗೆ ಜೆಡಿಎಸ್ ಮುಖಂಡರಾದ ದಿಲೀಪ್ ಕೆಸಗುಲಿ ರವರು ಧನ್ಯವಾದಗಳನ್ನು ಸಲ್ಲಿಸಿದರು.