ಸಕಲೇಶಪುರ :- 2024 25 ನೇ ಸಾಲಿನ ಹೆತ್ತೂರು ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆತ್ತೂರುನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಎಸ್ ಶಾಲೆ ಉಪಾಧ್ಯಕ್ಷರಾದ ಶ್ರೀ ಸಚಿನ್ ಹೆಚ್.ಎಂ ವಹಿಸಿಕೊಂಡು ಕಾರ್ಯಕ್ರಮ ಉದ್ಘಾಟಿಸಿದರು. ಹೆತ್ತೂರು ಕ್ಲಸ್ಟರ್ ನ 13 ಶಾಲೆಗಳಿಂದ ಸುಮಾರು 120 ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳು ಛದ್ಮವೇಷ, ಕಂಠಪಾಠ, ಧಾರ್ಮಿಕ ಪಠಣ,ಚಿತ್ರಕಲೆ, ದೇಶಭಕ್ತಿ ಗೀತೆ ,ಮಣ್ಣಿನ ಮಾದರಿ, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ತೀರ್ಪುಗಾರರಿಂದ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜು, ನಿವೃತ್ತ ಶಿಕ್ಷಕರಾದ ಲವ,ಸುರೇಶ್,ಸ್ಟುಡಿಯೊ ಮಧು, ಬಿ.ಆರ್.ಪಿ ಶೋಭಾ, ಬಿ.ಇ.ಐ.ಆರ್.ಟಿ ವಸಂತ್,ರಮೇಶ್, ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಸತೀಶ್ ಹೆಚ್.ಕೆ , ದೇವಕಿ ಮಲ್ಲೇಶ್, ಹಾಡ್ಯಾ ಸತೀಶ್,ಕುಮಾರಸ್ವಾಮಿ, ತನುಜ,ಹೇಮಂತ್ ಕುಮಾರ್, ಸೇರಿದಂತೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.