ಸಕಲೇಶಪುರ :- ತಾಲ್ಲೂಕಿನ ಉದೇವಾರ ಸರ್ಕಾರಿ ಬಿ ಎಲ್ ಅಂಬಿಕಾ ಪ್ರೌಢಶಾಲೆಯ 120 ವಿದ್ಯಾರ್ಥಿಗಳಿಗೆ ದಾನಿಗಳಾದ ಎಂ. ಆರ್. ಎಫ್ ಲೋಹಿತ್, ಸ್ಪೂರ್ತಿ ಕೃತಿಕ್, ಆರ್ಯನ್ ಹಿರಿಣ್ಣಯ್ಯ, ಪ್ರದೀಪ್ ಕುಮಾರ್ ಕೆ. ಆರ್, ಪ್ರಶಾಂತ್ ಎಲ್ ಅವರು ಉಚಿತ ನೋಟ್ ಬುಕ್ಸ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಕೃಷ್ಣ ಮೂರ್ತಿ ಹೆಚ್.ಏನ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತೇಜನ ನಿಡುವ ನಿಟ್ಟಿನಲ್ಲಿ ಈ ತರಹದ ದಾನಿಗಳು ಮುಂದೆ ಬರಬೇಕು ಉಳ್ಳುವವರು ಕೊಡುವ ಮನಸ್ಸನ್ನು ಹೊಂದಿದರೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹದ ಜೊತೆಗೆ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಸುಮಾ, ಮಾರುತಿ, ಶಿಲ್ಪಿ, ಸೆಲ್ವಾ ರಾಜು,ಅರುಣ್ ಗೌಡ, ಕೌಶಿಕ್ ಇದ್ದರು