ಹಾಸನ : ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರೈತರಿಗೆ ಅಂಗಾಂಶ ಕೃಷಿ ಬಗ್ಗೆ ಪರಿಚಯ.ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ” ಅಂಗಾಂಶ ಬಾಳೆ ಕೃಷಿ ” ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಡಾ. ಪ್ರಮೋದ್, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಹಾಸನ ಮತ್ತು ಡಾ. ಆಕಾಶ್. ಡಿ, ಸಹಾಯಕ ಪ್ರಾದ್ಯಪಕರು, ಕೃಷಿ ಜೈವಿಕ ತಂತ್ರಜ್ಞಾನ ವಿಭಾಗ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತಾನಾಡಿದ ಇವರು ಕೃಷಿಯಲ್ಲಿ ಅಂಗಾಂ ಶ ಕೃಷಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಅಂಗಾಂಶ ಕೃಷಿ ಎಂದರೆ ಅತ್ಯಂತ ನಿಯಂತ್ರಿಯಕ ಮತ್ತು ಆರೋಗ್ಯಕರ ಪರಿಸ್ಥಿತಿಗಳಲ್ಲಿ ಪರೀಕ್ಷಾ ಟ್ಯೂಬ್ ನಲ್ಲಿ ಸಸ್ಯದ ಭಾಗ ಅಥವಾ ಗುಂಪಿನ ಕೋಶವನ್ನು ಬಳಸಿಕೊಂಡು ಸಸ್ಯದ ಪ್ರಸರಣವನ್ನು ಅಂಗಾಂಶ ಕೃಷಿ ಎಂದು ಕರೆಯುತ್ತಾರೆ. ಹಾಗೂ ಅಂಗಾಂಶ ಬಾಳೆಯ ಉಪಯೋಗಗಳು, ಅನುಕೂಲಗಳನ್ನು ತಿಳಿಸಿದರು.
ಹಾಗೂ ಒಂದು ಗಿಡಕ್ಕೆ ಬೇಕಾದ ವೆಚ್ಚ ಹಾಗು ಅಂಗಾಂಶ ಬಾಳೆ ಗಿಡವನ್ನು ನಿರ್ವಯಿಸುವ ಬಗ್ಗೆ ತಿಳಿಸಿಕೊಟ್ಟರು. ಹಾಗು ಕೊನೆಯಲ್ಲಿ ಕಾರ್ಯಕ್ರಮಕ್ಕೆ ಭಾಗವಯಿಸಿದ ಎಲ್ಲಾ ರೈತರಿಗೂ ಉಚಿತವಾಗಿ ಅಂಗಾಂಶ ಬಾಳೆ ಗಿಡವನ್ನು ಕೊಡಲಾಯಿತು.
ಕೃಷಿ ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರು ಸಂತೋಷ ವ್ಯಕ್ತಪಡಿಸಿದರು.