ಹಾಸನ: ಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸುವುದರ ಮೂಲಕ ಹಿಂದೂ ಧರ್ಮ ಆಚರಣೆಗೆ ಬಾಧೆ ತರುವುದನ್ನು ಕಟುವಾಗಿ ವಿರೋಧಿಸಿ, ಯಾರು ಪಾಲಿಸುವುದಿಲ್ಲ ಅಂತಹ ಖಾಸಗೀ ಶಾಲೆಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ, ಕ್ರಿಸ್ಮಸ್ ನಲ್ಲಿ ರಜೆ ನೀಡುವುದರ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡುವುದನ್ನು ನಿಲ್ಲಿಸಲು ಆಗ್ರಹಿಸಿ ಶ್ರೀರಾಮಸೇನಾ ಕರ್ನಾಟಕ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.