ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲು ಅಕ್ಟೋಬರ್ ೨೪ ರಂದು ಬಾಗಿಲು ತೆಗೆಯಲಿದ್ದು, ವರ್ಷಕ್ಕೆ ಒಮ್ಮೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ.
ಶ್ರೀ ಹಾಸನಾಂಬೆ ದೇವಿ ದರ್ಶನದಿಂದ ಲಕ್ಷಾಂತರ ಭಕ್ತರು ತಮ್ಮ ಜೀವನವು ಪಾವನವಾಯಿತು ಎಂದು ಬಯಸುವ ಎಲ್ಲ ಭಕ್ತರಿಗೂ ಸುಗಮವಾಗಿ ಹಾಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಸಿಗಲೆಂಬ ಉದ್ದೇಶದೊಂದಿಗೆ, ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಕೆಲ ಬದಲಾವಣೆಗಳನ್ನು ಪ್ರಸ್ತುತ ವರ್ಷದಿಂದಲೇ ಅಳವಡಿಸಬೇಕು ಹಾಗೂ ದರ್ಶನ, ಹಾಗೂ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾದಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.