ಸಕಲೇಶಪುರ : ತಾಲ್ಲೂಕಿನ ಹೆತ್ತೂರು ಸಮೀಪದ ಹಾಡ್ಲಹಳ್ಳಿ,ಐಗೂರು,ಬೂಬ್ಬನಹಳ್ಳಿ,ಹಾಡ್ಯ,ಬಾಚ್ಚಿಹಳ್ಳಿ ಗ್ರಾಮದ ಗದ್ದೆ,ಕಾಫಿ ತೋಟದಲ್ಲಿ ಕಾಡಾನೆ ದಾಳಿ ನಡೆಸಿ ಭತ್ತದ,ಕಾಫಿ ಫಸಲು ನಾಶ ಮಾಡಿವೆ.
ಅರಣ್ಯ ಇಲಾಖೆ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಹೆತ್ತೂರು ಗ್ರಾಮದ ಷಣ್ಮುಖ ಮಾತನಾಡಿ, 2023ರಲ್ಲಿ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ ಭತ್ತದ ಫಸಲು ಮಾಡಿವೆ.ಕಾಡಾನೆಯಿಂದ ಆದ ಬೆಳೆ ನಷ್ಟಕ್ಕೆ ಪರಿಹಾರ ಅರ್ಜಿಯನ್ನು ಅರಣ್ಯ ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಅರಣ್ಯ ಅಧಿಕಾರಿಗಳು ಪರಿಹಾರ ನೀಡಿಲ್ಲ.
ಈ ವರ್ಷವೂ ಮತ್ತೆ ಕಾಡಾನೆ ದಾಳಿ ಮಾಡಿ ಭತ್ತದ ಬೆಳೆ ಮಾಡಿವೆ.ನಷ್ಟದ ಪರಿಹಾರ ಕೂಡಲೇ ಒದಗಿಸುವಂತೆ ಆಗ್ರಹಿಸಿದರು.
ಹಾಡ್ಯ ರಮೇಶ್ ಮಾತನಾಡಿ, ಈಚೆಗೆ ಹೆತ್ತೂರು, ಯಸಳೂರು ಹೋಬಳಿಯ ಹಲವೆಡೆಗಳಲ್ಲಿ ಪ್ರತಿದಿನ ಕಾಡಾನೆ ತೋಟ ಮತ್ತು ಗದ್ದೆಗಳಿಗೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.