
ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಿಶೋರಿ ಜಾಗೃತಿ ಕಾರ್ಯಕ್ರಮ.
ಸಕಲೇಶಪುರ :- ತಾಲ್ಲೂಕಿನ ಹೆತ್ತೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಕಿಶೋರಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಹಿರಿಯ ಶಿಕ್ಷಕಿಯಾದ ಶೋಭಾ ಸತೀಶ್ ರವರು ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ಲಿಂಗಸಮಾನತೆ, ವೈಯಕ್ತಿಕ ಶುಚಿತ್ವ, ಆಹಾರ ಮತ್ತು ಪೌಷ್ಟಿಕತೆ, ಮಕ್ಕಳ ಹಕ್ಕುಗಳು, ಸಾಮಾಜಿಕ ಮೌಲ್ಯಗಳು, ಕುಟುಂಬ ,ಸಮಾಜ ಉದ್ಯೋಗ ಸ್ಥಳಗಳಲ್ಲಿ ಹೆಣ್ಣು ಮಕ್ಕಳ ಪಾತ್ರ ಹೆಣ್ಣು ,ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಂದರ್ಭಗಳು ,ಆ ಸಂದರ್ಭ ಗಳನ್ನು ಎದುರಿಸಬಹುದಾದ ಸಲಹೆ ಹಾಗೂ ಮಾರ್ಗದರ್ಶನವನ್ನು ಸ್ಪಷ್ಟವಾಗಿ ವಿವರವಾಗಿ ತಿಳಿಸಿದರು.
ನಂತರ ಶಿಕ್ಷಕಿಯಾದ ಹೇಮಲತಾರವರು ಹೆಣ್ಣು ಮಕ್ಕಳಲ್ಲಾಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ನಾಲ್ಕು, ಐದು, ಆರು ಮತ್ತು 7ನೇ ತರಗತಿಯ ಒಟ್ಟು 75 ಹೆಣ್ಣು ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕಿಯಾದ ತನು,ರೂಪಾ, ಕುಮಾರಿ ಲಕ್ಷ್ಮಿ ಇದ್ದರು .

