ಆಲೂರು : ತಾಲೂಕಿನ ಕಾರಗೋಡು ಗ್ರಾಮದ ಮೋಹಿತ (ಸುಮಾರು 29 ವರ್ಷ) ಹಾಗೂ ಅದೇ ಗ್ರಾಮದ ಗಾನವಿ ( ಸುಮಾರು 24 ವರ್ಷ ) ಇಬ್ಬರು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಇತ್ತೀಚೆಗೆ ಆಕೆ ಹುಡುಗನನ್ನು ಪ್ರೀತಿಸಲು ನಿರಾಕರಿಸಿದ್ದು, ಆತ ಬೆಂಬಿಡದೆ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದರಿಂದಾಗಿ ಎರಡು ಮನೆಯವರು ಹಲವಾರು ಬಾರಿ ರಾಜಿ ಪಂಚಾಯಿತಿ ನಡೆಸಿ ಇಬ್ಬರೂ ಒಬ್ಬರ ತಂಟೆಗೆ ಒಬ್ಬರು ಹೋಗದಂತೆ ತೀರ್ಮಾನ ಕೈಗೊಂಡಿದ್ದರು.
ಈ ಸಂಬಂಧವಾಗಿ ನೋಟರಿ ಲಾಯರ್ ಬಳಿ ಪತ್ರ ಬರೆಸಲು ಎರಡು ಮನೆಯವರು ಗ್ರಾಮದ ಮುಖಂಡರೊಟ್ಟಿಗೆ ಲಾಯರ್ ಆಫೀಸ್ ನಲ್ಲಿ ಪತ್ರ ಬರೆಸುತ್ತಿದ್ದ ಸಂದರ್ಭದಲ್ಲಿ, ಗ್ರಂಥಾಲಯದ ಮುಂಭಾಗ ಕಾರಿನ ಬಳಿ ಕುಳಿತಿದ್ದ ಗಾನವಿಯ ಮೇಲೆ ಮೋಹಿತ ಏಕಾಯಕಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ತಲೆ ಹಾಗೂ ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದು ಸ್ಥಳಿ ಯರು ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯಿದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆ ನಡೆಸಿದ ಲೋಹಿತ ಸ್ಥಳದಿಂದ ಪರಾರಿಯಾಗಿದ್ದು ಈ ಸಂಬಂಧವಾಗಿ ಪಟ್ಟಣದ ಠಾಣೆಯಲ್ಲಿ ಪ್ರಕರಣ. ದಾಖಲಾಗಿದೆ.