ಸಕಲೇಶಪುರ : ವಳಲಹಳ್ಳಿ ಕೂಡಿಗೆ..ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಇನ್ನು ಕೆಲವೇ ದಿನ ಬಾಕಿ ಇದ್ದು, ನಿಮ್ಮ ಮನೆ ಹಾಗೂ ಅಕ್ಕಪಕ್ಕ ಮನೆಯವರು ಇದರ ಉಪಯೋಗವನ್ನು ಪಡೆದುಕೊಳ್ಳುವ ಮೂಲಕ ನಿಮ್ಮಿಂದ ಅವರಿಗೂ ಸಹಾಯವಾಗಲಿ ದಯಮಾಡಿ ಕಾರ್ಯಕ್ರಮದ ಬಗ್ಗೆ ತಿಳಿಸಿ, ಅವರನ್ನು ಕರೆತನ್ನಿ. ನೀವು ಮಾಡುವ ಅಳಿಲು ಸೇವೆ ಇನ್ನೊಬ್ಬರ ಜೀವನಕ್ಕೆ ಬೆಳಕಾಗುತ್ತೆ .ಆಯೋಜಕರು ಮಾಡುವ ಸೇವೆ ಸಾರ್ಥಕ ಆಗುತ್ತೆ. ಆದಷ್ಟು ಜನರಿಗೆ ಶೇರ್ ಮಾಡ್ತಾ ಮಾಹಿತಿ ಹಂಚಿ ಈ ಸೇವೆಗೆ ನಿಮ್ಮ ಕೈ ಜೋಡಿಸಿ. ಧನ್ಯವಾದಗಳು : ಹರ್ಷ ಕಲ್ಲುತೋಟ.

ವಿಶೇಷ ಸೂಚನೆ: ಶಿಬಿರ ನಡೆದ ದಿನವೇ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆ ಆದ ಬಳಿಕ ನಿಮ್ಮ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಯ ಉಚಿತ ಬಸ್ ಸೌಕರ್ಯವಿರುತ್ತದೆ. ಶಿಬಿರಕ್ಕೆ ರೋಗಿಗಳು ಬರುವಾಗ ತಲೆಗೆ ಸ್ನಾನ ಮತ್ತು ಪುರುಷರು ಮುಖ ಕ್ಷೌರ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಿ ಬರಬೇಕು. ಆಸ್ಪತ್ರೆಯಲ್ಲಿ ಉಚಿತ ಊಟದ ಸೌಲಭ್ಯ ಇರುತ್ತದೆ.

ಆಸ್ಪತೆಯಲ್ಲಿ 2 ದಿನಗಳ ಮಟ್ಟಿಗೆ ತಂಗಲು ಬೇಕಾಗುವ ಟವಲ್ ಸೋಪು, ಬಪ್, ಬಟ್ಟೆ, ತಟ್ಟೆ, ಲೋಟ ಇತ್ಯಾದಿಗಳನ್ನು ತರುವುದು. ಸೂಚನೆ :- ಆಧಾರ್ ಕಾರ್ಡ್ (ಜೆರಾಕ್ಸ್ 2ಪ್ರತಿ) ಹಾಗೂ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ತರಬೇಕು. ಯಶಸ್ವಿನಿ ಕಾರ್ಡ್ ಮತ್ತು ಧರ್ಮಸ್ಥಳ ಸಂಘದ ಕಾರ್ಡ್ ಇರುವವರು ತರಬೇಕು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed