ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಸುಮಾರು 14 ಗ್ರಾಮಗಳಿಂದ 800ಕ್ಕೂ ಹೆಚ್ಚು ಮನೆಗಳಿದ್ದು ವೃದ್ಧರು ಮಕ್ಕಳು ಸೇರಿದಂತೆ 3500 ಹೆಚ್ಚು ಜನರು ವಾಸವಾಗಿದ್ದಾರೆ. ಈ ಗ್ರಾಮ ಪಂಚಾಯಿತಿಯ ಬಹುತೇಕ ಗ್ರಾಮಗಳು ಹಳ್ಳಿ ಪ್ರದೇಶದಿಂದ ಕೂಡಿದ್ದು ಮನೆಗಳು ದೂರ ದೂರ ಅಂತರದಲ್ಲಿ ಇದ್ದು ಸುಮಾರು ಗ್ರಾಮಗಳಿಗೆ ಸರಿಯಾದ ಸಾರಿಗೆ ಸಂಪರ್ಕಗಳು ವ್ಯವಸ್ಥೆ ಇಲ್ಲ.
ಜೊತೆಗೆ ಜೋರಾದ ಮಳೆ ಹಾಗೂ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಈ ಎಲ್ಲ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದಿಂದ ವಳಲಹಳ್ಳಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ಕೊಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಕ್ಟರ್ ಶಿವಸ್ವಾಮಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷರಾದ ವಳಲಹಳ್ಳಿ ಅಶ್ವಥ್, ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎಂ.ಕೆ ದರ್ಶನ್, ಉಪಾಧ್ಯಕ್ಷರಾದ ರುದ್ರೇಶ್,ಗೌರವಾಧ್ಯಕ್ಷರಾದ ರಮೇಶ್,ಕಾರ್ಯದರ್ಶಿಯಾದ ಅರುಣ್ ಗೌಡ ಕರಡಿಗಾಲ, ಖಜಾಂಚಿಗಳಾದ ಹಿರಿದನಹಳ್ಳಿ ಹೂವಣ್ಣ ಗೌಡ, ಜಂಟಿ ಕಾರ್ಯದರ್ಶಿಯಾದ ಸುಬ್ಬಣ್ಣ, ನಿರ್ದೇಶಕರುಗಳಾದ ಇಷ್ಟಾರ್ಥ, ಕೆ. ಎಂ ಪರಮೇಶ್, ಕರಡಿಗಾಲ ಹರೀಶ್, ನಾಗೇಶ್ ಕೆರೆಮನೆ,ತಿಪ್ಪೇಸ್ವಾಮಿ ಇದ್ದರು.