
ಬೇಲೂರು : ಪೂಜ್ಯ ಬೌದ್ಧ ಬಿಕ್ಕು ಬೋಧೀದತ್ತ ಮಹಾಥೇರೋ ರವರ ದಿವ್ಯ ಸಾನಿದ್ಯದಲ್ಲಿ ನಡೆದ ಈ ಭೀಮ ಉತ್ಸವ ಬುದ್ಧರಿಗೆ ಬಾಬಾ ಸಾಹೇಬರಿಗೆ ಕ್ಯಾಂಡಲ್ ಹಚ್ಚುವ ಮೂಲಕ ಉದ್ಘಾಟನೆಗೊಂಡಿತು.
ಸಂವಿಧಾನ ಪೀಠಿಕೆ ವಾಚಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷರು ವಿವಿಧ ಮುಖಂಡರೂ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಗ್ರಾಮದ ರಸ್ತೆಗಳೆಲ್ಲ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ರಂಗೋಲಿ, ತಳಿರು ತೋರಣಗಳಿಂದ ಸಿಂಗಾರಗೊಂಡ ಗ್ರಾಮ ಹಬ್ಬದ ವಾತಾವರಣದಂತೆ ಸಂಭ್ರಮಿಸುತ್ತಿತ್ತು. *ಭೀಮ ಉತ್ಸವ* ಕಾರ್ಯಕ್ರಮದಲ್ಲಿ ಬುದ್ಧ ಧಮ್ಮ ಪ್ರವಚನ ಸೇರಿದಂತೆ ಪೂಜ್ಯ ಭಂತೇಜಿಯವರು ಬಾಬಾ ಸಾಹೇಬರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಚೆಸ್ಕಾಂ ನೌಕರರನ್ನು ಸನ್ಮಾನಿಸಲಾಯಿತು,
ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದ ನಡುವಿನಲ್ಲಿ ಬೇಲೂರಿನ ಹೆಸರಾಂತ ಗಾಯಕರಾದ ಕುಮಾರ್ ಚಂದನ್ ರವರಿಂದ ಬುದ್ಧ ಬಸವ ಅಂಬೇಡ್ಕರರ *ಗೀತಗಾಯನ* ಕಾರ್ಯಕ್ರಮವೂ ಸಹ ಇತ್ತು.
23 ಕುಟುಂಬಗಳಿರುವ ಈ ಗ್ರಾಮದಲ್ಲಿ ಈ ಭೀಮ ಉತ್ಸವ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರೂ ಸೇರಿದಂತೆ ಸುಮಾರು 200/250 ಜನ ಭೀಮ ಬಂಧುಗಳು ಸೇರಿದ್ದರು.
ಒಟ್ಟಾರೆ ಹೇಳುವುದಾದರೆ ಚಿಕ್ಕ ಗ್ರಾಮದಲ್ಲಿ ಚೊಕ್ಕದಾದ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.



