ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘವು ಪ್ರತಿ ವರ್ಷವೂ ವಿಶ್ವ ಮಣ್ಣು ದಿನಾಚರಣೆಯನ್ನು ಡಿಸೆಂಬರ್ 5ರಂದು ಬಹಳ ಅರ್ಥಗರ್ಭಿತವಾಗಿ ಆಚರಿಸಿಕೊಂಡು ಬರುತ್ತಿದೆ. ಅದೇ ರೀತಿ 2024ರ ಡಿಸೆಂಬರ್ 5 ರಂದು ಅಂದರೆ ಇಂದು ಕಾಫಿ ಮಂಡಳಿ ಸಹಭಾಗಿತ್ವದೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭಗೊಂಡು ಮಣ್ಣಿಗೆ ಪೂಜೆ ಸಲ್ಲಿಸಲಾಯಿತು. ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು.
ವೇದಿಕೆ ಕಾರ್ಯಕ್ರಮವನ್ನು 10 ಗಂಟೆ 45 ನಿಮಿಷಕ್ಕೆ ಪ್ರಾರಂಭಗೊಳಿಸಲಾಗಿ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹೆಚ್‍ಡಿಪಿಎಪಿಆರ್ ನ ಅಧ್ಯಕ್ಷರಾದ ಕೃಷ್ಣಮೂರ್ತಿ ಖಂಡಿಗೆ ರವರು ಸ್ವಾಗತಿಸಿದರು.
ಹೆಚ್.ಡಿ.ಪಿ.ಎ ವಿಚಾರ ಸಂಕಿರಣ ಸಮಿತಿಯ ಅಧ್ಯಕ್ಷರಾದ ಬಿ ಎಂ ಮೋಹನ್ ಕುಮಾರ್ ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರಿನ ವಿಜ್ಞಾನಿಗಳಾದ ಡಾ. ಸಂದೀಪ್ ರವರು ಕಾಫಿ ಕೊಯ್ಲುತ್ತರ ಗುಣಮಟ್ಟ ಸುಧಾರಣ ತಂತ್ರಗಳ ಬಗ್ಗೆ ಪ್ರಾತ ಕ್ಷೀಕೆಯ ಮೂಲಕ ಮಾಹಿತಿ ಒದಗಿಸಿ ಕೊಟ್ಟರು.
ಬಳಿಕ, ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆ ದೋಣಿಗಲ್ ನ ಹಿರಿಯ ವಿಜ್ಞಾನಿಗಳಾದ ಡಾ. ಹರ್ಷ ರವರು ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಕಾಳುಮೆಣಸು ಕೊಯ್ಲು ತರ ಗುಣಮಟ್ಟ ಸುಧಾರಣಾ ತಂತ್ರಗಳ ಬಗ್ಗೆ ಮಾಹಿತಿ ಒದಗಿಸಿ ಕೊಟ್ಟರು.
ಕಾಫಿ ಮಂಡಳಿಯ ಉಪ ನಿರ್ದೇಶಕರು ಕಾಫಿ ಮಾರುಕಟ್ಟೆಯ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.
ಎಚ್ ಡಿ ಪಿ ಎ ಅಧ್ಯಕ್ಷರಾದ ಎ ಎಸ್ ಪರಮೇಶ್ವರ್ ಅವರು ಸಮಾರೋಪ ಮಾತುಗಳನ್ನಾಡಿದರು. ಹೆಚ್ ಡಿ. ಪಿ. ಎ ಗೌರವ ಕಾರ್ಯದರ್ಶಿ ಕೆ ಬಿ ಲೋಹಿತ್ ರವರು ವಂದನಾರ್ಪಣೆ ನೆರವೇರಿಸಿದರು
ವಿಚಾರ ಸಂಕಿರಣದಲ್ಲಿ ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು,ಹೆಚ್‍ಡಿಪಿಎ ಮಾಜಿ ಅಧ್ಯಕ್ಷರುಗಳು, ಪಿಆರ್‌ಎಫ್‌ನ ಮಾಜಿ ಅಧ್ಯಕ್ಷರುಗಳು, ಹೆಚ್ ಡಿ ಪಿ ಎ ನಿರ್ದೇಶಕರುಗಳು ಮತ್ತು ತಾಲೂಕು/ ಹೋಬಳಿ ಹಾಗೂ ಪಂಚಾಯಿತಿ ಬೆಳಗಾರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಬೆಳಗಾರರು ಭಾಗವಹಿಸಿದ್ದರು. ಕಾಫಿ ಮಂಡಳಿ ಹಿರಿಯ ಸಂಪರ್ಕಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.