ಸಕಲೇಶಪುರ :- ದಿನಾಂಕ 06-12-2024 ನೇ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರಸಂತೆಯ ವಿನಾಯಕ ಕಲ್ಯಾಣ ಮಂಟಪದಲ್ಲಿ ಆಯುಷ್ಮಾನ್ ಅರೋಗ್ಯ ಮಂದಿರ /ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ರಸ್ತೆಯಲ್ಲಿ ಶಾಲೆಯ ಮಕ್ಕಳು ಹಾಗೂ ವಿವಿಧ ಕಲಾತಂಡದಿಂದ, ಆಶಾ ಕಾರ್ಯಕರ್ತರು ಹಾಗೂ ಅರೋಗ್ಯ ಸಿಬ್ಬಂದಿಗಳಿಂದ,ಗ್ರಾಮಸ್ಥರು ಸೇರಿದಂತೆ ಜಾಗೃತಿ ಮೂಡಿಸುವ ಜಾಥಾ ನೆಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿ ಕಾರ್ಯಕ್ರಮ ಯಶಸ್ವಿ ಮಾಡಬೇಕಾಗಿ ಶುಕ್ರವಾರ ಸಂತೆಯ ಆಯುಷ್ಮಾನ್ ಅರೋಗ್ಯ ಮಂದಿರ /ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ತಮಗೆಲ್ಲರಿಗೂ ಆದರದ ಸುಸ್ವಾಗತ ಹಾಗೂ ವಿನಂತಿ.