ಅರಸೀಕೆರೆ : ಸಮಾಜಸೇವೆ ಮಾಡಲು ಜಾತಿ ಧರ್ಮ ಗಡಿ ಯಾವುದು ಅಡ್ಡ ಬರುವುದಿಲ್ಲ ಎಂದು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಬುಧವಾರ ತಿಳಿಸಿದರು
ತಾಲೂಕಿನ ಕಣಕಟ್ಟೆ ಹೋಬಳಿ ಮಾಡಳು ನಿರಂಜನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮೀಜಿ ನಿರಂಜನ ಪೀಠದ ಭಕ್ತರು ಅರಸೀಕೆರೆ ನೆರೆಯ ತಿಪಟೂರು ತಾಲೂಕಿನ ಸದ್ಭಕ್ತರು ಬೆಂಗಳೂರಿನಲ್ಲಿ ನೆಲೆಸಿದ್ದು ಪ್ರಸ್ತುತ ನಿರಂಜನ ಪೀಠ ಸೇವಾ ಟ್ರಸ್ಟ್ ಎಂಬ ಹೆಸರಿನಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಮುಂದೆ ಬಂದಿರುವುದು ಸ್ವಾಗತ ಅರ್ಹ ಸಂಗತಿ ಎಂದು ತಿಳಿಸಿದರು
ಇಂದು ಅಸ್ತಿತ್ವಕ್ಕೆ ಬಂದಿರುವ ಈ ಸೇವಾ ಟ್ರಸ್ಟ್ ಧಾರ್ಮಿಕ ಕ್ಷೇತ್ರ ಸೇರಿದಂತೆ ಶಿಕ್ಷಣ ಸಾಮಾಜಿಕ ಆರೋಗ್ಯ ಪರಿಸರ ಮುಂತಾದ ಜನಪರ ಸೇವಾ ಕ್ಷೇತ್ರಗಳಲ್ಲಿt ತೊಡಗಿಸಿಕೊಳ್ಳುವ ಮೂಲಕ ನಿರಂಜನ ಪೀಠಕ್ಕೆ ಕೀರ್ತಿಯನ್ನು ತರಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು
ಸಾಧು ವೀರಶೈವ ಲಿಂಗಾಯಿತ ಸಮಾಜದ ಮುಖಂಡ ಮರುಳಸಿದ್ದ ಸ್ವಾಮಿ ನಾಗಸಮುದ್ರ ಮಾತನಾಡಿ 400 ವರ್ಷಗಳ ಇತಿಹಾಸ ಹೊಂದಿರುವ ನಿರಂಜನ ಪೀಠದ ಹಿಂದಿನ ಲಿಂಗೈಕ್ಯ ಎಲ್ಲಾ ಪೂಜ್ಯರು ಸಹ ಎಲೆಮರೆಕಾಯಿಯಂತೆ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾ ಸಮಾಜ ಮುಖ್ಯವಾಗಿ ಕೆಲಸ ಮಾಡಿದ್ದರು ಸಮಾಜದ ಗಮನ ಸೆಳೆದಿರಲಿಲ್ಲ ಆದರೆ ರುದ್ರಮುನಿ ಸ್ವಾಮೀಜಿ ಪೀಠಾಧ್ಯಕ್ಷರಾದ ಮೇಲೆ ಧಾರ್ಮಿಕ ಕ್ಷೇತ್ರ ಸೇರಿದಂತೆ ಭೇದವಿಲ್ಲದಂತೆ ಶೈಕ್ಷಣಿಕ ಕ್ಷೇತ್ರ ತೆರೆದು ಪೀಠದ ಅಭಿವೃದ್ಧಿಯತ್ತ ಶ್ರಮಿಸುತ್ತಾ ಬಂದಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು
ಸಭೆಯಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷ ಮತ್ತಿಹಳ್ಳಿ ರಾಜಯ್ಯ ಗೌರವಾಧ್ಯಕ್ಷ ವೀರಭದ್ರಪ್ಪ ಸೇವಾ ಟ್ರಸ್ಟ್ ನ ಸದಸ್ಯರು ಮಾಡಳು ಶಿವಲಿಂಗಪ್ಪ ಸುಶಿವಾಳ ಪುಟ್ಟಪ್ಪ