ಹಾಸನ : ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಪಾಳ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು,ಪಾಳ್ಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಆದ ಎಸ್ ಎನ್ ಪ್ರಕಾಶ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ಇವರಿಗೆ ಜೆಡಿಎಸ್ ಅಧ್ಯಕ್ಷರಾದ ಕೆ ಎಸ್ ಮಂಜೇಗೌಡರು ,ಹಾಸನ ಜಿಲ್ಲಾ ಕ್ರೇಂದ್ರ ಬ್ಯಾಂಕ್ ನ ಅಧ್ಯಕ್ಷ ರಾದ ನಾಗರಾಜ್ ಸೋಮನಹಳ್ಳಿ, ನಿರ್ದೇಶಕರಾದ ಕಬ್ಬಿನ ಹಳ್ಳಿ ಜಗದೀಶ್ , ನಿರ್ದೇಶಕರಾದ ಪ್ರವೀಣ್ ಕೆ ಆರ್,ಕರವೇ ಜಿಲ್ಲಾ ಕಾರ್ಯಧರ್ಶಿ ರಘು ಪಾಳ್ಯ,ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕರು ಆದ ತನುಗೌಡ ಹಾಗೂ ಪಾಳ್ಯ ಗ್ರಾಮ ಪಂಚಾಯಿತಿ ಸದಸ್ಯರು, ಪಾಳ್ಯ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ಹಾಗೂ ಸಿಂಗೋಡನಹಳ್ಳಿ ಗ್ರಾಮದ ಸರ್ವರು ಶುಭಾಶಯ ಕೋರಿದರು.