ಸಕಲೇಶಪುರ – ಫೆಬ್ರವರಿ ತಿಂಗಳಲ್ಲಿ ಮುಸ್ಲಿಮರು ತಬ್ಲಿಕ್ ಜಮಾತ್ ನಡೆಸಲು ಮಾಡಿರುವ ಮಳಲಿ ಪಂಚಾಯತಿ ವ್ಯಾಪ್ತಿಗೆ ಸೇರಿದ ಭೂಮಿಯನ್ನು ಯಾವುದೇ ಅನುಮತಿ ಪಡಿಯದೇ JCB ಬುಲ್ಡೇಝರ್ ತಂದು 10 ಎಕರೆಗು ಹೆಚ್ಚು ಭೂಮಿಗೆ ಮಣ್ಣು ತುಂಬಿಸಿದ್ದಾರೆ.
ವಾಹನ ನಿಲುಗಡೆಗೆಂದು ರಾಷ್ಟ್ರೀಯ ಹೆದ್ದಾರಿಯಿಂದ ತಿರುಗಲು ಪೊಲೀಸ್ ಅನುಮತಿ ಪಡೆಯದೇ ಯಾವುದೇ ಸುರಕ್ಷತೆಗೆ ಒತ್ತು ಕೊಟ್ಟಿರುವುದಿಲ್ಲ ಮಳಲಿ ಗ್ರಾಮದವರಿಗಾಗಿ ಮೀಸಲು ಇರುವ ರುದ್ರಭೂಮಿಯನ್ನು ದುರುದ್ದೇಶಪೂರ್ವಕವಾಗಿ ಸ್ಮಶಾನ ಎಂದು ಗೊತ್ತಿದ್ದರೂ ಸಹ ನೂರಾರು ವರ್ಷದಿಂದ ಶವಸಂಸ್ಕಾರ ಮಾಡಿಕೊಂಡು ಬರುತ್ತಿರುವ ಜಾಗವನ್ನು ಹಾಗು ದೇವರ ಕಲ್ಲನ್ನು ವಿರೂಪಗೊಳಿಸಲು ಹುನ್ನಾರ ಮಾಡಿರುವ ತಬ್ಲಿಕ್ ಜಮಾತ್ ಸಮಿತಿ ವಿರುದ್ಧ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುವ JCB ಯಂತ್ರ ಜಪ್ತಿ ಮಾಡಬೇಕು ಮತ್ತು ಚಾಲಕನ ಮೇಲೆ 153/A ಅಡಿ ಕೇಸ್ ದಾಖಲಿಸಿ ಬಂಧನ ಮಾಡಬೇಕು ಎಂದು ಹಿಂದೂ ಸಂಘಟನೆಯ ಮುಖಂಡ ರಘು ಸಕಲೇಶಪುರ ಆಗ್ರಹಿಸಿದ್ದಾರೆ.