ಸಕಲೇಶಪುರ : ಹೆತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12 ಮಂದಿ ನಿರ್ದೇಶಕರ ಬಲ ಹೊಂದಿದ್ದು ಮುಂದಿನ ಐದು ವರ್ಷದ ಅವಧಿಗೆ ನೆಡೆದ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೊಟದ ಅಭ್ಯರ್ಥಿಗಳು ಭರ್ಜರಿ ಜಯಬೇರಿ ಬಾರಿಸಿದ್ದರು.

ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಸಕ್ಷ ಸ್ಥಾನಕ್ಕೆ ಹೆಚ್.ಇ.ನಾಗಭೂಷಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಆರ್.ನೇತ್ರ ಸುರೇಶ್ ಹೂರತು ಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು.

ಸಹಕಾರ ಇಲಾಖೆ ಅಧಿಕಾರಿ ಎನ್. ಮಂಜುನಾಥ್ ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗಣ್ಯರು,ಮುಖಂಡರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವಯಿಂದ ಅಭಿನಂದಿಸಲಾಯಿತ್ತು.

ಮಾಜಿ ಶಾಸಕ ಹೆಚ್.ಕೆ.ಕುಮಾರಸಾಮಿ, ಜೆ.ಡಿ.ಎಸ್ ತಾಲ್ಲೂಕು ಅಧ್ಯ ಕ್ಷ ದೊಡ್ಡದೀಣೆ ಸೋಮಶೇಖಕರ್, ಮುಖಂಡಾರದ ಹೆಚ್.ಎಸ್.ದಿವಾಕರ್, ಸಚಿನ್ ಪ್ರಸಾದ್, ಬೆಕ್ಕನಹಳ್ಳಿ ನಾಗರಾಜು,ವಳಲಹಳ್ಳಿರಾಜೇಗೌಡ, ಬಿಜೆಪಿ ಮುಖಂಡ ಮೋಹನ್ ಕುಮಾರ್,ಹೆಚ್.ಎಂ.ಡಿಲಾಕ್ಷ, ಗ್ರಾಮ ಪಂಚಾಯತಿ ಅಧ್ಯಕ್ಷ ಹಳ್ಳಿಬಯಲು ನಾಗರಾಜು, ಮಾಜಿ ಜಿಲ್ಲಾಪಂಚಾಯತಿ ಸದಸ್ಯೆ ಉಜ್ಮರಿಜ್ವಿ ಸುದರ್ಶ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರುಗಳಾ ಹೆಚ್.ಆರ್.ಶ್ರೀ ಧರ್, ಹೆಚ್,ಆರ್.ಕೃಷ್ಣಪ್ರಸಾದ್, ಹೆಚ್.ಪಿ,ವೇದಮೂರ್ತಿ ಹೆಚ್.ಢಿ.ಪ್ರತಾಪ್, ಹೆಚ್.ಪಿ.ಸತೀಶ್, ಕೆ.ಬಿ.ಮಲ್ಲೇಶ್, ದೀಪ್ತಿ.ಹೆಚ್.ಎಂ, ಹೆಚ್.ಬಿ.ರೋಹಿತ್, ಹೆಚ್.ಕೆ.ಕುಶಾಲರಾಜು, ಎಂ.ಕೆ.ಚಂದ್ರಕುಮಾರ್, ಎನ್ ಡಿ ಎ ಮೈತ್ರಿ ಕೊಟದ ಮುಖಂಡರು,ಕಾರ್ಯಕರ್ತರು ಇದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed