ಆಲೂರು :ಕಿತಬೂರು ಹಾಲು ಉತ್ಪಾದಕರ ಸಂಘದ ನೂತನ ಸಭಾಂಗಣ ಉದ್ಘಾಟನೆಯನ್ನು ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ನೆರವೇರಿಸಿ ಮಾತಾನಾಡಿದರು

ರೈತರು ಆರ್ಥಿಕವಾಗಿ ಮೇಲೆ ಬರಬೇಕಾದರೆ ಸಿಲ್ಕ್ ಮತ್ತುಮಿಲ್ಕ್ ಕಾರಣ ರೈತರಿಗೆ ಅವೇಆಧಾರಸ್ತಂಭ ಹಾಲು ಸರಬರಾಜುಮಾಡಿ ಎಷ್ಟೋ ಕುಟುಂಬಗಳು ಜೀವನನಿರ್ವಹಣೆ ಮಾಡುತ್ತಿದ್ದಾರೆ ಮಾಜಿ ಶಾಸಕ ಹೆಚ್,ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು

ಡೈರಿಗೆ ಹಾಲು ಸರಬರಾಜು ಮಾಡುವ ರೈತರು ತಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಪ್ರಮಾಣದ ಹಾಲನ್ನು ಮನೆ ಬಳೆಕೆಗೆ ಉಪಯೋಗಿಸಿಕೊಂಡು ರೈತರು ತಮ್ಮ ಅರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು

ಈ ಸಂದರ್ಭದಲ್ಲಿ ಕೆ ಎಸ್ ಮಂಜೇಗೌಡ ಮಾತನಾಡಿ ನಮ್ಮ ಭಾಗದಲ್ಲಿಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ರೈತರ ಉಪಕಸುಬಾದ ಪಶುಪಾಲನೆ ಹಾಗೂ ಹಾಲಿನ ಉತ್ಪಾದನೆಯಿಂದ ಜೀವನಕ್ಕೆ ತುಂಬ ಅನುಕೂಲವಾಗುತ್ತಿದೆ. ಹಾಲಿನ ಮಾರಾಟದಿಂದ ರೈತರಿಗೆ ಆದಾಯ ಬರುತ್ತಿದ್ದು, ಇದರಿಂದ ಅನೇಕ ರೈತ ಕುಟುಂಬಗಳು ಅಭಿವೃದ್ಧಿ ಹೊಂದಿವೆ.

ರೈತರು ಗುಣಮಟ್ಟದ ಹಾಲಿನ ಉತ್ಪಾದನೆಗೆ ಹೆಚ್ಚಿನ ಗಮನಹರಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಲಾಭವಾಗುತ್ತದೆ. ಮುಂದಿನ ಹೆಚ್ಚಿನ ಹಾಲು ಉತ್ಪಾದನೆ ಯಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುದು ಆಶಯವಾಗಿದೆ ತಾಲ್ಲೂಕಿನ ಹಾಗೂ ಜಿಲ್ಲೆಯ ಹೈನೋದ್ಯಮ ಉತ್ತಮ ಪ್ರಗತಿ ಕಾಣಲು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರಾದ ರೇವಣ್ಣ ರವರ ಪರಿಶ್ರಮ ಬಹಳ ದೊಡ್ಡದು ಎಂದರು..

ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಪಿ ಎಲ್ ನಿಂಗರಾಜು ಹಾಗೂ ಅಧಿಕಾರಿಗಳಾದ ಭವ್ಯ, ಹೆಚ್ ಎನ್, ಯೋಗೇಶ್ ದರ್ಮೇಶ್ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ರಂಗನಾಥ್, ಕಾಂತರಾಜು, ರಂಗೇಗೌಡ ಹಾಗೂ ಜನಪ್ರತಿನಿಧಿಗಳು ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *