ಹಾಸನ : ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ನೂತನ ಕಚೇರಿ ಉದ್ಘಾಟನೆ ಸಮಾರಂಭವನ್ನು ವೇದಿಕೆಯಲ್ಲಿನ ಗಣ್ಯಮಾನ್ಯರು ನಡೆಸಿಕೊಟ್ಟರು.

ಕೇಂದ್ರದಿಂದ ವೀರಶೈವ-ಲಿಂಗಾಯತರ ಸಮಾಜಕ್ಕೆ ಅನ್ಯಾಯ – ತೀವ್ರ ಖಂಡನೆ :- ವೀರಶೈವ ಲಿಂಗಾಯತ ಸಮಾಜ ಕೇವಲ ಕರ್ನಾಟಕ ರಾಜ್ಯವಲ್ಲದೆ ನೆರೆಯ ಆಂದ್ರ, ತಮಿಳುನಾಡು. ಮಹಾರಾಷ್ಟ್ರ ಸೇರಿದಂತೆ ಇನ್ನೂ ಮುಂತಾದ ರಾಜ್ಯದಲ್ಲಿನ ಬಹುಸಂಖ್ಯಾತ ಸಮುದಾಯದಕ್ಕೆ ಕೇಂದ್ರ ಸರ್ಕಾರಗಳು ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಲು ಅನ್ಯಾಯ ಮಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದರನಹಳ್ಳಿ‌ ನಟರಾಜ್ ಖಂಡಿಸಿದರು.

ಹಾಸನ ನಗರದ ತಣ್ಣೀರುಹಳ್ಳಿ ಮಠದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನೂತನ ಕಚೇರಿ ಲೋಕಾರ್ಪಣೆ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮಾಜ ರಾಜಕೀಯ ಸ್ಥಾನ ಮಾನದಿಂದ ವಂಚಿತವಾಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿ ಸಂಘಟನೆ ಇಲ್ಲವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ ರವರು ಪ್ರತಿ ಮನೆ ಮನೆಯಲ್ಲಿ ಕೂಡ ಮಹಾಸಭಾಕ್ಕೆ ಸದಸ್ಯತ್ವ ಪಡೆಯಬೇಕು. ಹಾಗೇಯೇ ಹಾಸನ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಜನಸಂಖ್ಯೆ ಇದೆ ಆದರೆ 8466 ಸದಸ್ಯತ್ವವಿದೆ. ಮುಂದಿನ 2026 ರ ಒಳಗೆ ಕನಿಷ್ಟ ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಸದಸ್ಯ ಮಾಡಬೇಕು ಈ ಬಗ್ಗೆ ತಾಲ್ಲೂಕು ಅಧ್ಯಕ್ಷರು ಕಾರ್ಯಪ್ರವೃತ್ತಿ ಕಡೆ ಗಮನ ನೀಡಬೇಕು. ಸಂಘಟನೆಗೆ ಒತ್ತು ನೀಡುವ ದಿಸೆಯಲ್ಲಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಈ ಭಾರಿ ಬಸವ ಜಯಂತಿಯನ್ನು ಅದ್ದೂರಿಯಿಂದ ಆಚರಿಸಬೇಕೆಂದು ತಿಳಿಸಿದರು.

ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಜಾತಿ ಜನತೆಯನ್ನು ಮುಂದಿಟ್ಟುಕೊಂಡು ಬರುತ್ತಿರುವುದು ನಿಜಕ್ಕೂ ಶೋಚನೀಯ, ಸರ್ವರು ಸಂಘಟನೆಗೆ ನೀಡಿದರೆ ಮಾತ್ರ ಇಂತಹ ದುಷ್ಟ ಶಕ್ತಿಗಳಿಂದ ಗಳಿಂದ ಸಮಾಜವನ್ನು ಸಂಘಟಿಸಬಹುದು ಎಂದು ಕರೆ ನೀಡಿದರು.

ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಮಾತನಾಡಿ, ಹಾಸನ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತನ್ನದೆಯಾದ ಛಾಪು ಮೂಡಿಸುವ ಜೊತೆಗೆ ಸಂಘಟನೆ ಒತ್ತು ನೀಡುತ್ತಾ ಬಂದಿದೆ. ಇಡೀ ಜಿಲ್ಲೆ ನಾಲ್ಕು ಲಕ್ಷ ಸಮಾಜದವರು ಮಹಾಸಭಾಕ್ಕೆ ನೋಂದಣಿ ಮಾಡಿಕೊಂಡರೆ ಮಾತ್ರ ಅಗತ್ಯ ನಮ್ಮದೆ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯ ಅಭಿಪ್ರಾಯದಿಂದ ತಣ್ಣೀರುಹಳ್ಳ ಮಠದ ಸಮೀಪದಲ್ಲಿಯೇ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಾಲಯವನ್ನು ಆರಂಭಿಸಲಾಗಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಸಮಾಜದ ಸಂಘಟನಾತ್ಮಕ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅರಕಲಗೂಡು ದೊಡ್ಡಮಠದ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು, ಹಾಸನ ತಣ್ಣೀರುಹಳ್ಳ ಮಠದ ಪೂಜ್ಯ ಶ್ರೀ ವಿಜಯಕುಮಾರ ಸ್ವಾಮೀಜಿಗಳು. ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಾನಂದ ತಗಡೂರು, ಸಮಾಜ ಮುಖಂಡ ಎನ್.ಆರ್.ಸಂತೋಷ,ರಾಜ್ಯ ಮಟ್ಟದ ಉಪಾಧ್ಯಕ್ಷ ರಾಜೇಶ್ವರಿರಾಜ್ಯ ಮಹಿಳಾ ಘಟಕದ ಅಧ್ಯಕ್ಣೆ ಮುಕ್ತಾಂಭ,ರಾಷ್ಟ್ರೀಯ ಘಟಕ ಉಪಾಧ್ಯಕ್ಷ ಬಿ.ಕೆ.ಚಂದ್ರಕಲಾ,ರಾಜ್ಯ ಯುವ ಘಟಕ ಮನೋಹರ ಅಬ್ಬಿಗೆರೆ ಮಾಜಿ ಕೆ. ಎಸ್.ಅರ್.ಟಿ.ಸಿ ಉಪಾಧ್ಯಕ್ಷರು ಈಶ್ವರಪ್ಪ, ಹಾಸನ ತಾಲ್ಲೂಕು ಅಖಿಲ ಭಾರತ ವೀರಶ್ಯೇವ ಲಿಂಗಾಯತ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್.ಬೇಲೂರು ಅಧ್ಯಕ್ಷ ಬಸವರಾಜ, ಅಲೂರು ಅಧ್ಯಕ್ಷರಾದ ಅಜೀತ್,ಬಿ.ಎಂ.ರವಿಕುಮಾರ್, ವಿಕ್ರಮ್ ಕೌರಿ ಸಮಿತಿ ನಿರ್ಧಶಕರಾದ ಗೀತಾ ಶಿವರಾಜ್ ಹಾಸನ ಮಹೀಳಾ ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.

ಹಾಸನ ಜಿಲ್ಲೆಯಲ್ಲಿ ವೀರಶೈವ ಲಿಂಗಾಯಿತ ಸಮಾಜಕ್ಕೆ ರಾಜಕೀಯ ಸ್ಥಾನಮಾನ ದಿನದಿಂದ ದಿನಕ್ಕೆ ದೂರವಾಗುತ್ತಿರುವ ನಿಟ್ಟಿನಲ್ಲಿ ಹಾಸನ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳ ಸೇರಿಕೊಂಡು ಎಲ್ಲ ನಮ್ಮ ಸಮಾಜದ ಮುಖಂಡರ ಸಮುಖದಲ್ಲಿ ಬೃಹತ್ ಸಮಾವೇಶವನ್ನು ನಡೆಸಬೇಕು, ಇಲ್ಲವಾದರೆ ನಮಗೆ ಯಾವುದೇ ಸ್ಥಾನ ಮಾನ ಸಿಗುವುದಿಲ್ಲ, ಇನ್ನೂ ಮುಂದೆ ರಾಜಕೀಯ ಸ್ಥಾನ ಕಿತ್ತುಕೊಳ್ಳಬೇಕು ಎಂದು ಅರಸೀಕೆರೆ ಸಮಾಜದ ಮುಖಂಡ ಎನ್.ಆರ್. ಸಂತೋಷ್ ಹೇಳಿದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed