ಸಕಲೇಶಪುರ‌ : ಸಕಲೇಶಪುರದ ಕೆಂಪೇಗೌಡ ಪುತ್ತಳಿ ಬಳಿ ಅತಿವೇಗವಾಗಿ ಹೋಗುತಿದ್ದ ವಾಹನ ಸಂಖ್ಯೆ KA13-D 3890 Ashok Leyland. ವಾಹನದ ಮೇಲೆ ಅನುಮಾನ ಬಂದ ಪೊಲೀಸ್ ತಪಾಸಣೆ ಮಾಡಲು ಮುಂದಾದಾಗ ವಾಹನ ನಿಲ್ಲಿಸದೆ ಹೋದಾಗ ಪೊಲೀಸ್ ನವರು ಗಾಡಿ ಹಿಡಿದು ತಪಾಸಣೆ ಮಾಡಿದಾಗ ಅತಿ ಕ್ರೂರವಾಗಿ ಕಟ್ಟಿ ಸಾಗಿಸುತ್ತಿದ್ದ ಗೋವುಗಳ ಆಕ್ರಂದನ ಎಂಥವರ ಕಣ್ಣಲ್ಲೂ ನೀರು ತರಿಸುವಂಥದ್ದು.

ಅಕ್ರಮವಾಗಿ ಆಲೂರು ತಾಲ್ಲೂಕು ತಿಮ್ಮನಹಳ್ಳಿ ದೇವರ ನಂದಿ ಬಸವನನ್ನು ಕದ್ದು ತುಂಬಿದ್ದ ಗೋಕಳ್ಳ ತನ್ನದೇ ಊರಿನಿಂದ ಗೋವುಗಳನ್ನ ಕದ್ದು ತುಂಬಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ಗೋಸಾಗಾಟ ಮಾಡುತ್ತಿದ್ದ ಅಶೋಕ್ ಲೇಯ್ಲಂಡ್ ವಾಹನ ಮಾಲೀಕ ಪ್ರವೀಣ ಮತ್ತು ಚಾಲಕ ಸ್ಥಳದಿಂದ ಓಡಿ ಹೋಗಿದ್ದು ವಾಹನ ಸಹಿತ ಗೋವುಗಳ ಸಂರಕ್ಷಣೆ ಮಾಡಿದ್ದಾರೆ

ಹಲವು ದಿನಗಳಿಂದ ಪೊಲೀಸ್ ನವರಿಗೆ ಚಳ್ಳೆಹಣ್ಣು ತಿನಿಸುತಿದ್ದ ಮಾಡಬ್ಲು ಗ್ರಾಮದ ಗೋಸಾಗಾಟದ ವಾಹನ ಹಿಡಿಯಲು ಕೊನೆಗೂ ಯಶಸ್ವಿಯಾದ ಪೊಲೀಸ್ ನವರು. ಇನ್ನ ಮೇಲಾದರೂ ಅಕ್ರಮ ಗೋಸಾಗಾಣಿಕೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಹಿಂದೂ ಸಾರ್ವಜನಿಕರು ಮತ್ತು ಗೋಪ್ರೇಮಿಗಳ ಆಗ್ರಹ ಮೇಲ್ಕಂಡ ವಾಹನ ಸಂಖ್ಯೆ KA13-D 3890 ಪಾಸಿಂಗ್ ಮಾಡಲು KA 19 ರಿಜಿಸ್ಟ್ರೇಷನ್ ವಾಹನ ಬಂದಿದ್ದು ಆ ವಾಹನ ಓಡಾಡಿರುವ ಬಗ್ಗೆ CCTV ಪರಿಶೀಲಸಿ ಆ ವಾಹನದ ಮೇಲು ಕೇಸ್ ದಾಖಲಿಸಿ ಅದರಲ್ಲಿ ಇದ್ದವರ ಮೇಲೆ ಕೇಸ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಾಮದೂತ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *