ಆಲೂರು : ತಾಲ್ಲೂಕಿನ ಕಣತೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಷಾ ಪಿ ಯು ಸಿ ಪರೀಕ್ಷೆಯಲ್ಲಿ ಆಲೂರು ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಕಲಾ ವಿಭಾಗದಲ್ಲಿ ಪಡೆದ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೃಥ್ವಿ ಜಯರಾಮ್ ಮಾತನಾಡಿ ಇಂಥಹ ಗ್ರಾಮೀಣ ಭಾಗದ ನಮ್ಮ ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿನಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಯ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿರುವುದು ಅತ್ಯಂತ ಸಂತೋಷವನ್ನು ನೀಡಿದೆ ಇಲ್ಲಿನ ಶಿಕ್ಷಕರು ಸಹ ಹೆಚ್ಚಿನ ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಭ್ಯಾಸ ನೀಡಿ ತಾಲ್ಲೂಕಿಗೆ ಹೆಸರು ತಂದಿದ್ದು ಹೆಮ್ಮೆಯ ವಿಶೇಷವಾಗಿದೆ ಇದೇ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಕರಿದ್ದು ವಿದ್ಯಾರ್ಥಿಗಳು ಅದನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಂಡರೆ ಖಂಡಿತವಾಗಿ ಯಶಸ್ಸು ಸಾಧನೆ ಮಾಡುವುದಕ್ಕೆ ಸಾಧ್ಯ ಇದಕ್ಕೆ ಉಷಾ ಉದಾಹರಣೆಯಾಗಿದ್ದಾರೆಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೂ ಗ್ರಾಮೀಣ ಭಾಗದ ಪೋಷಕರು ಖಾಸಗಿ ಶಾಲೆಗಳತ್ತ ಮನ ಹೋಲಿಸದೆ ಸರ್ಕಾರಿ ಶಾಲೆಗಳತ್ತ ಗಮನಹರಿಸಬೇಕೆಂದರು ಇದೇ ಸಂದರ್ಭದಲ್ಲಿ ಉಷಾ ಹಾಗೂ ಶಿಕ್ಷಕರನ್ನ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪೃಥ್ವಿ ಜಯರಾಮ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಕಾಲೇಜು ಪ್ರಾಂಶುಪಾಲರಾದ ಮಲ್ಲಿಗೆಯಮ್ಮ, ಶಿಕ್ಷಕರಾದ ಕಲ್ಲೇಶ್ ಟಿ ಎಸ್, ಪಂಚಾಯತಿ ಕಾರ್ಯದರ್ಶಿ ವಿನಯ್, ಸದಸ್ಯರಾದ ಡೇಗರಾಜು, ಜಗದೀಶ್ , ಪಂಚಾಯತಿ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *