
ಸಕಲೇಶಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಸಾಮಾಜಿಕ, ಆರ್ಥಿಕ , ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಮತ ಹರೀಶ್ ರಾವ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಕಛೇರಿಯಲ್ಲಿ ನಡೆದ ಗಣ್ಯರ ಸಭೆಯಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ದರ್ಮಸ್ಥಳ ಸಂಘವು 1982 ರಲ್ಲಿ ಆರಂಭಗೊಂಡು ಅಂದಿನಿಂದ ಗ್ರಾಮೀಣ ಪ್ರದೇಶದಲ್ಲಿರುವ ಬಡವರ,ಮಹಿಳೆಯರ ,ರೈತರ,ಆರ್ಥಿಕ,ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಯೋಜನೆಗಳನ್ನು ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ್ದು ಇಂದು ಗ್ರಾಮಾಭಿವೃದ್ದಿ ಯೋಜನೆ ದೇಶದ ಪ್ರಮುಖ ಚಾರಿಟಬಲ್ ಟ್ರಸ್ಟ್‌ಗಳಲ್ಲಿ ಒಂದಾಗಿದೆ ಎಂದರು.
ಸಭೆಯಲ್ಲಿ ಡಾ.ನವೀನ್ ಚಂದ್ರಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ತಾಲೂಕು ಯೋಜನಾಧಿಕಾರಿ ರಾಜೇಶ್, ಲಯನ್ಸ್ ಮಂಜುನಾಥ್, ಟಿಎಪಿಸಿಎಂಎಸ್ ಅದ್ಯಕ್ಷ ಶಶಿಕುಮಾರ್, ವಿಶ್ವಕರ್ಮ ಸಮಾಜದ ಅದ್ಯಕ್ಷ ಶ್ರೀನಿವಾಸ್, ಇತರರು ಇದ್ದರು.
