
ಬೇಲೂರು: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿನ ವಿಶ್ವಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಸೂರ್ಯರಶ್ಮಿ ಪ್ರವೇಶೋತ್ಸವ ಮಂಗಳವಾರ ನಡೆಯಿತು.
ಇದಕ್ಕಾಗಿ ಬೆಳಗ್ಗೆ ವಿಶೇಷವಾಗಿ 6ರಿಂದಲೇ ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಗಿತ್ತು. ಆಸಕ್ತರು ಸೂರ್ಯರಶ್ಮಿ ಕಿರಣ ದೇವರ ಪಾದ ಸ್ಪರ್ಶಿಸುವ ಅಪೂರ್ವ ಕ್ಷಣಕ್ಕೆ ಕಾದು ಕುಳಿತಿದ್ದರು.
ಸೂರ್ಯೋದಯದ ನಂತರ ಬೆಳಗ್ಗೆ 6.09ರಿಂದ ಗವಾಕ್ಷಿ ಮೂಲಕ ಸೂರ್ಯನ ಕಿರಣ ಶ್ರೀ ಚನ್ನಕೇಶವಸ್ವಾಮಿಯ ಉತ್ಸವಮೂರ್ತಿಯ ಮೇಲೆ ಬಿತ್ತು. ಆನಂತರ 6.12ಕ್ಕೆ ಸೂರ್ಯದರ್ಶನವಾಯಿತು.
ನಂತರ 6.18 ರ ವರೆಗೆ ನಿಮಿಷದವರೆಗೆ ಕೆಂಪು ಬಣ್ಣದ ಸೂರ್ಯ ರಶ್ಮಿ ಪಸರಿಸಿತು. 6.20ರ ನಂತರ ಹಂತ ಹಂತವಾಗಿ ಕಿರಣಗಳು ಕ್ಷೀಣಿಸಿದವು. ಈ ಸೂರ್ಯರಶ್ಮಿ ಸ್ಪರ್ಶದ ಕುತೂಹಲಕರ ವಿದ್ಯಾಮಾನವು ನೆರೆದಿದ್ದ ಭಕ್ತರನ್ನು ಪುಳಕಿತಗೊಳಿಸಿತು.


