
ಸಕಲೇಶಪುರ:- ತಾಲ್ಲೂಕಿನ ಹೆತ್ತೂರು ಹೋಬಳಿಯ ಕರಡಿಗಾಲ ಗ್ರಾಮದ ಮಾಜಿ ಸೈನಿಕರದ ಕೆ.ಜಿ ಧರ್ಮರಾಜ ಹಾಗೂ ರಮ್ಯಾ ದಂಪತಿಯ ಇಬ್ಬರು ಮಕ್ಕಳು ಕಝಾಕಿಸ್ತಾನ್ ದಲ್ಲಿ ನೆಡೆದ ಏಷ್ಯನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನ ಹಾಗೂ ಕಂಚು ಪದಕವನ್ನು ಪಡೆದು ದೇಶಕ್ಕೆ ನಾಡಿಗೆ ಕೀರ್ತಿಯನ್ನು ತಂದಿದ್ದಾರೆ.
ಕಝಾಕಿಸ್ತಾನ್ ದ ಉರಾಲ್ಸ್ಕ್ ನಲ್ಲಿ ನೆಡೆದ ವಿಶ್ವ ಕರಾಟೆ ಒಕ್ಕೂಟದ ಅಧ್ಯಕ್ಷರಾದ ( ಡಬ್ಲ್ಯೂ ಕೆ ಸಿ) ವಿಯಾಚೆಸ್ಲಾವ್ ಟಿಮೊಫೀವ್ ಅಧ್ಯಕ್ಷತೆಯಲ್ಲಿ ಏಪ್ರಿಲ್ 19 ರಿಂದ 20, 2025 ಏಷ್ಯನ್ ಕರಾಟೆ ಚಾಂಪಿಯನ್ ಶಿಪ್ ನೆಡೆಯಿತು.
ಒಟ್ಟು 11 ದೇಶಗಳು ಈ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಭಾರತ ದೇಶದಿಂದ ಬೆಂಗಳೂರು ಮಿಲಿಟರಿ ಶಾಲೆಯ ಒಕಿನಾವಾ ಗೊಜುಕನ್ ಕರಾಟೆ-ಡು ತರಬೇತಿ ಶಾಲೆ ಇಂದ 9 ಕ್ರೀಡಾಪಟುಗಳು ತರಬೇತುದಾರ ಚೆಲ್ಲಾದುರೈ ಸೀವಾಲಪೆರಿಯಾರ್ ನಿಂದ ತರಬೇತಿ ಪಡೆದು ಭಾಗವಹಿಸಿದ್ದರು.
ಜೂನಿಯರ್ ವಿಭಾಗದಲ್ಲಿ ಕರಾಟೆ ಕಟಾ ವಿಭಾಗದಲ್ಲಿ 11 ವರ್ಷದ ಭಗತ್ ಗೌಡ ಕಂಚು – 3 ನೇ ಸ್ಥಾನ ಪಡೆದರು.ಹಾಗೂ ಜೂನಿಯರ್ ವಿಭಾಗದ 7 ವರ್ಷದ ನಿಧಿತ್ ಗೌಡ ಚಿನ್ನ ಪಡೆದರು.ನಮ್ಮ ಭಾರತೀಯ ಕರಾಟೆ ತಂಡವು ಒಂದು ಚಿನ್ನದ ಪದಕ, ಮೂರು ಬೆಳ್ಳಿ ಪದಕಗಳು ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿದೆ.
ಏಷ್ಯನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 7 ಜನರು ಪದಕಗಳನ್ನು ಪಡೆದರು.
ಇವರ ಈ ಸಾಧನೆಗೆ ಕರಡಿಗಾಲ ಗ್ರಾಮದವರು ಸೇರಿದಂತೆ ನಾಡು ದೇಶದ ಅತ್ಯಂತ ಪ್ರಸಂಸೆ ವ್ಯಕ್ತವಾಗಿದೆ.




