
. ಆಲೂರು:- ತಾಲೂಕಿನ ಪಂಚಾಯಿತಿ ವ್ಯಾಪ್ತಿಗೆ ಸೇರಿದ ವಾರ್ಡ್ ನಂಬರ್ ಎರಡರಲ್ಲಿ ಸೋಮವಾರ ರಾತ್ರಿ ಸುರಿದ ಬಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗೆ ಮನೆಯವರನ್ನು ಆತಂಕಕ್ಕೆ ಗುರಿ ಮಾಡಿದೆ.
ಸ್ಥಳಕ್ಕೆ ಆಗಮಿಸಿದ ವಾರ್ಡ್ ನ ಸದಸ್ಯ ನಿಂಗರಾಜು (ಪಾಪು) ಮೇಲೆ ಆಕ್ರೋಶ. ವಾರ್ಡ ಸದಸ್ಯರಾಗಿದ್ದುಕೊಂಡು ನಮ್ಮ ಮನೆಯ ಮುಂದೆ ಚರಂಡಿಗಳು ಮುಚ್ಚಿ ಹೋಗಿದ್ದು ಗಿಡಗಂಟೆಗಳು ಬೆಳೆದಿದ್ದು ಚರಂಡಿ ನೀರು ಸರಾಗವಾಗಿ ಹೋಗದೆ ಇರುವುದೇ ಮನೆಗೆ ನೀರು ನುಗ್ಗಲು ಕಾರಣವೆಂದು ಆಕ್ರೋಶ.
ಸುರಿಯುತ್ತಿರುವ ಭಾರಿ ಮಳೆಯಲ್ಲೇ ಚರಂಡಿಯನ್ನು ಸೂಚಿಗೊಳಿಸಲು ಮುಂದಾದ ಮನೆಯವರು. 3 4 ಮನೆಗಳಿಗೆ ಮಳೆಯ ಚರಂಡಿ ನೀರು ನುಗ್ಗಿ ಮನೆಯವರೆಲ್ಲ ಪಾತ್ರೆಯ ಬಕೇಟು ಡಬ್ಬಗಳಲ್ಲಿ ಮಳೆಯ ನೀರನ್ನು ಆಚೆಗೆ ತೆಗೆದು ಹಾಕಿದರು, ಅದೇ ವೇಳೆಗೆ ಸ್ಥಳಕ್ಕೆ ಬಂದ ಸದಸ್ಯ ನಿಂಗರಾಜು ಮೇಲೆ ಆಕ್ರೋಶಗೊಂಡ ಮನೆಯವರು ಪಟ್ಟಣ ಪಂಚಾಯತಿ ನಿರ್ಲಕ್ಷ್ಯಕ್ಕೆ ಮಳೆಯ ನೀರು ಮನೆಗಳಿಗೆ ನುಗ್ಗಿದೆ.
ಹಲವಾರು ವರ್ಷಗಳಿಂದ ಚರಂಡಿಯಾ ಅಕ್ಕಪಕ್ಕದಲ್ಲಿ ಗಿಡ ಗಂಟೆ ಇರುವುದನ್ನು ಕ್ಲೀನ್ ಮಾಡದಿರುವುದೇ ಇದಕ್ಕೆ ಕಾರಣ ಎಂದು ಸದಸ್ಯರ ಮೇಲೆ ಮಾತಿನ ಚಕಮಗೆ ಬಿದ್ದರು. ಆ ವೇಳೆ ಸ್ಥಳದಲ್ಲಿದ್ದ ಅಕ್ಕ ಪಕ್ಕದ ಮನೆಯ ಗ್ರಾಮಸ್ಥರು ಸಮಾಧಾನಗೊಳಿಸಿ ಮನೆಗೆ ನುಗ್ಗಿದ ನೀರನ್ನು ಹೊರ ಹಾಕಲು ಸಹಕರಿಸಿದರು.
ರಾತ್ರಿ ವಿಷಯ ತಿಳಿದು ನಾವು ವರದಿಗೆ ಮುಂದಾದಾಗ ಕೂಡಲೇ ಸಿಬ್ಬಂದಿಗೆ ಶುಚಿಗೊಳಿಸಲು ದೂರವಾಣಿ ಮೂಲಕ ತಿಳಿಸಿದ ಸದಸ್ಯ ನಿಂಗರಾಜು.
ವರದಿಗೆ ಮುಂದಾದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಚರಂಡಿ ಶುಚಿಗೊಳಿಸಲು ಮುಂದಾದ ಪೌರಕಾರ್ಮಿಕ ಸಿಬ್ಬಂದಿಗಳು.
ರಾತ್ರಿ ಸುರಿದ ಮಳೆಗೆ ಮನೆಗೆ ನೀರು ನುಗ್ಗಿ ಅವಾಂತರವಾಗಿದ್ದನ್ನು ಸುದ್ದಿ ಮಾಡಲು ಮುಂದಾದ ಬೆನ್ನಲ್ಲೇ ಪೌರಕಾರ್ಮಿಕರ ನೆರವಿನಿಂದ ಚರಂಡಿಗಳನ್ನು ಕ್ಲೀನ್ ಮಾಡಲಾಯಿತು.




