
ಆಲೂರು : ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವದಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು ವಿಶ್ವದ ಸಂವಿಧಾನಗಳಲ್ಲಿ ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದ್ದು, ಭಾರತದಂತಹ ದೊಡ್ಡ ವೈವಿಧ್ಯಮಯ ಜಾತ್ಯತೀತ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕಬೇಕು ಎಂಬ ಉದ್ದೇಶದಿಂದ ಬಾಬಾ ಸಾಹೇಬರು ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ಬೇರೆ ಬೇರೆ ದೇಶಗಳ ಪರಿಸ್ಥಿತಿ ಹೇಗಿದೆ ಅಂದರೆ ಕೇವಲ ಉಳ್ಳವರು ಮಾತ್ರ ಆದೇಶದ ಅಧಿಕಾರ ಚುಕ್ಕಾಣಿಯನ್ನು ಹಿಡಿಯಬೇಕು ಆದರೆ ಈ ದೇಶದ ಕಟ್ಟ ಕಡೆಯ ವ್ಯಕ್ತಿ ಅಂದ್ರೆ ಟೀ ಮಾಡುವವರು ಸಮೇತ ಭಾರತ ದೇಶದ ಪ್ರಧಾನಮಂತ್ರಿ ಆಗಬಹುದು ಎಂಬುದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಈ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕಾರ ಮಾಡಬಹುದು ಅಂತ ಹೇಳಿದ್ರೆ ಅವರು ಪಡೆದಂತಹ ವಿದ್ಯೆಯಿಂದ ಅನುಭವಿಸಿದ ನೋವಿನಿಂದ ಇದನ್ನ ಮಾಡಲಿಕ್ಕೆ ಸಾಧ್ಯವಾಯಿತು. ಪ್ರಧಾನ ಮಂತ್ರಿಗಳು ಪಾರ್ಲಿಮೆಂಟ್ ನಲ್ಲಿ ಒಂದು ಮಾತನ್ನ ಹೇಳಿದ್ದಾರೆ. ದೇಶದಲ್ಲಿ ತಾನು ವಿಷವನ್ನು ಕುಡಿದು ಮುಂದಿನ ಪೀಳಿಗೆಗೆ ಅಮೃತವನ್ನು ಕೊಟ್ಟು ಹೋಗಿರುವಂತಹ ಯಾರದಾರೂ ವ್ಯಕ್ತಿ ಇದ್ದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅಂತ ಹೇಳಿರುತ್ತಾರೆ. ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಭಾರತದ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡದೇ ಇದ್ದರೆ ಇಂದು ನಮ್ಮಗಳ ಪರಿಸ್ಥಿತಿ ಪ್ರಾಣಿಗಳಿಗಿಂತಕಡೆಯಾಗಿರುತ್ತಿತ್ತು.
ಅಂದರೆ ಇಲ್ಲಿ ಮತದಾನವನ್ನ ಬಾಬಾ ಸಾಹೇಬರು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೋಲಿಸಿದ್ದಾರೆ. ಕಾರಣ ನಮ್ಮ ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುವಾಗ ನೂರಾರು ಬಾರಿ ಯೋಚಿಸಿ ಉತ್ತಮ ವರ ನನ್ನ ಆಯ್ಕೆ ಮಾಡಿ ಕೊಡುತ್ತಾರೆ, ಅದೇ ರೀತಿಯಾಗಿ ಮತದಾನವನ್ನ ಮಾಡುವಾಗಲೂ ಕೂಡ ನಮ್ಮನ್ನ ಆಳುವ ಜನಪ್ರತಿನಿಧಿಯಲ್ಲಿ ಉತ್ತಮರನ್ನ ಆಯ್ಕೆ ಮಾಡುವ ಸ್ವಾತಂತ್ರವನ್ನು ನಮಗೆ ನೀಡಿದ್ದು. ನಮ್ಮ ಮತಗಳನ್ನು ಮಾರಿಕೊಂಡರೆ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಮಾರಿಕೊಂಡಂತೆ ಎಂಬ ಸಂದೇಶವನ್ನು ಪ್ರಸ್ತುತ ಸಮಾಜಕ್ಕೆ ರವಾನಿಸಿದ್ದಾರೆ.
ಬಾಬಾ ಸಾಹೇಬರು ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಮತ್ತು ಹೆಣ್ಣು ಆಸ್ತಿ ಹಕ್ಕನ್ನು ನೀಡುವುದರ ಜೊತೆಗೆ ಪುರುಷ ಮತ್ತು ಮಹಿಳೆ ಎಂಬ ಭೇದವಿಲ್ಲದೆ ಕಾರ್ಮಿಕರಿಗೆ ದಿನದಲ್ಲಿ ಎಂಟು ಗಂಟೆಯ ಕೆಲಸ ಹಾಗು ವಾರದಲ್ಲಿ ಒಂದು ದಿನದ ರಜೆಯ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಮಹಾನ್ ಮಾನವತಾವಾದಿಯಾಗಿದ್ದಾರೆ.
ಅವರ ಜೀವನ ಶೈಲಿಯನ್ನ ಹಾಗೂ ಸಿದ್ದಾಂತವನ್ನು ತತ್ವದರ್ಶಗಳನ್ನು ನಾವುಗಳು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು. ಈ ಸಮಾಜಕ್ಕೆ ಆದರ್ಶವಾಗಬೇಕೆಂದು ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ಹಾಗೂ ತಾಲ್ಲೂಕು ತಹಸೀಲ್ದಾರ್ ಮಲ್ಲಿಕಾರ್ಜುನ ಪ್ರಸ್ತಾವಿಕವಾಗಿ ಮಾತನಾಡಿ ಭಾರತದಂತ ಜಾತ್ಯತೀತ ರಾಷ್ಟ್ರಕ್ಕೆ ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಆಗೀನ ಸಂದರ್ಭದಲ್ಲಿ ಸಮಾಜದಲ್ಲಿ ಇದ್ದಂತಹ ಕುಂದು ಕೊರತೆಗಳ, ಸಮಸ್ಯೆಗಳು,ಪಿಡುಗುಗಳು ಇವುಗಳ ಅನುಗುಣವಾಗಿ ಪರಿಹಾರವನ್ನು ಕಂಡುಹಿಡಿಯುವ ದೃಷ್ಟಿಯಿಂದ ಸಾಮಾಜಿಕನ್ಯಾಯ,ಸಮಾನ ಹಕ್ಕು,ಶಿಕ್ಷಣ, ಸಮಾನತೆ, ತತ್ವ ಆದರ್ಶ ಇವುಗಳನ್ನು ಅಳವಡಿಸಿ ಎಲ್ಲರಿಗೂ ಸಮಾನತೆಯ ಜೀವನಕ್ಕೆ ಅವಕಾಶ ಕಲ್ಪಿಸಿ ಕೊಟ್ಟರು ಎಂದರು.
ಮುಖ್ಯ ಭಾಷಣಕಾರ ಚನ್ನರಾಯಪಟ್ಟಣ ಪಿ ಡಬ್ಲ್ಯೂ ಡಿ ಇಲಾಖೆಯ AEE ಚಂದ್ರಶೇಖರ್ ಮಾತನಾಡಿ ಅಂಬೇಡ್ಕರ್ ಅವರು ಸಾಕಷ್ಟು ನೋವಿನಲ್ಲೂ ಭಾರತ ಮಾತೆಗಾಗಿ ಕವಲುಗಾರನಾಗಿ ಕೆಲಸ ಮಾಡುತ್ತಾ ಅಸಮಾನತೆ ಅಸ್ಪೃಶ್ಯತೆಯನ್ನು ಸಹಿಸಿಕೊಂಡು ದೇಶದಲ್ಲಿ ಎಲ್ಲಾ ವರ್ಗದವರಿಗೂ ಉತ್ತಮ ಶಿಕ್ಷಣ ಉದ್ಯೋಗ ಮಾತ್ರವಲ್ಲದೆ ರಾಜಕೀಯದಲ್ಲೂ ಸಮಾನತೆ ಕಲ್ಪಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಕಲೇಶಪುರ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಮಾತನಾಡಿ ದೇಶದ ಉದ್ದಗಲಕ್ಕೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಾಹೇಬರ 134ನೇ ಜನ್ಮದಿನೋತ್ಸವವನ್ನು ಆಚರಿಸುತ್ತಿದ್ದು, ಅವರ ಆದರ್ಶಗಳನ್ನು ನಾವು ಸರಿಯಾಗಿ ಪಾಲಿಸುತ್ತಿಲ್ಲ. ಬಾಬಾ ಸಾಹೇಬರ ಬಗ್ಗೆ ಜೀವನ ಪರ್ಯಂತ ಹೇಳಿದರು ಸಾಕಾಗುವುದಿಲ್ಲ. ನಾವು ಯಾರಿಂದ ಈ ಸ್ಥಾನಮಾನಕ್ಕೆ ಬಂದಿದ್ದೇವೆ, ಈ ದೇಶದ ಸ್ವತಂತ್ರ ಪ್ರಜೆಗಳಾಗಿ ನಾವು ಜೀವನ ನಡೆಸುತ್ತಿರುವುದು ಯಾರಿಂದ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ದೇಶಕ್ಕೆ ಯಾವುದೇ ಸಮುದಾಯ ವರ್ಗದ ಜನರಿಗೆ ಮೋಸ ಮಾಡಿದರು ಅಂಬೇಡ್ಕರ್ ಅವರ ಶಾಪ ತಟ್ಟದೇ ಬಿಡುವುದಿಲ್ಲ. ಯಾರು ಬಾಬಾ ಸಾಹೇಬರ ಹೆಸರನ್ನು ಹೇಳಿ ದೌರ್ಜನ್ಯ ಮಾಡುತ್ತಾರೆ, ಅವರಿಗೆ ನೋವುಂಟು ಮಾಡುವಂತಹ ಕೆಲಸವನ್ನು ಯಾರು ಮಾಡುತ್ತಾರೆ, ಅವರಿಗೆ ಬಾಬಾ ಸಾಹೇಬರ ಶಾಪ ತಟ್ಟದೆ ಬಿಡುವುದಿಲ್ಲ. ಅವರು ನೀಡಿರುವ ಸಂವಿಧಾನದಿಂದ ಯಾವುದೇ ಅಧಿಕಾರಿಗಳಿರಬಹುದು ನೌಕರರಿರಬಹುದು ರಾಜಕೀಯ ವ್ಯಕ್ತಿಗಳಿರಬಹುದು ಯಾವುದೇ ಒಬ್ಬ ಪ್ರಜೆಯೂ ಸ್ವತಂತ್ರವಾಗಿ ಬದುಕುತ್ತಿದ್ದಾನೆ ಎಂದರೆ ಅದು ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ. ಎಲ್ಲವೂ ನಡೆಯುತ್ತಿರುವುದು ಅವರು ನೀಡಿರುವ ಸಂವಿಧಾನದಿಂದಲೇ ಈ ಸಮಾಜಕ್ಕೆ ಅವರ ಆದರ್ಶ ಸಿದ್ಧಾಂತಗಳನ್ನು ಪಾಲಿಸಿಕೊಂಡು ಹೋಗೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಪ್ರಗತಿಪರ ಚಿಂತಕರು ಹಾಗೂ ಶೋಷಿತ ಜನಾಂಗದ ಮುಖಂಡರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪ.ಪಂ ಅಧ್ಯಕ್ಷೆ ತಾಹೀರ ಬೇಗಂ,ಕಾಂಗ್ರೆಸ್ ಮುಖಂಡ ಮುರುಳಿಮೋಹನ್,ತಹಶೀಲ್ದಾರ್ ಮಲ್ಲಿಕಾರ್ಜುನ, ಬಿ.ಇ.ಓ ಕೃಷ್ಣೇಗೌಡ, ಟಿ.ಎಸ್.ಡಬ್ಲ್ಯೂ ನಿಂಗರಾಜ್ ಸಿ.ಡಿ.ಪಿ.ಓ ಮಲ್ಲೇಶ್, ಮುಖ್ಯ ಭಾಷಣಕಾರರಾದ ಚಂದ್ರಶೇಖರ್, ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ, ಮುಖಂಡರುಗಳಾದ ಗೇಕರವಳ್ಳಿ ಬಸವರಾಜು, ದೇವರಾಜು, ರಂಗಯ್ಯ ಅರಸಪ್ಪ ದಲಿತ ಮುಖಂಡ ಪುಟ್ಟರಾಜು ,ಇತರರು ಉಪಸ್ಥಿತರಿದ್ದರು.